Saturday, June 25, 2022

Latest Posts

ಸಾಕು ನಾಯಿಯನ್ನು ಗುಂಡಿಟ್ಟು ಹತ್ಯೆ, ಆರೋಪಿ ಬಂಧನ

ಹೊಸದಿಗಂತ ವರದಿ, ಉಡುಪಿ:

ಸಾಕು ನಾಯಿಯೊಂದನ್ನು ಗುಂಡಿಟ್ಟು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಕೆಮ್ಮಣ್ಣು ನಿಡಂಬಳ್ಳಿ ನಿವಾಸಿ ಬ್ರಾನ್ ಡಿಸೋಜ ಬಂಧಿತ ಆರೋಪಿ. ಕೆಮ್ಮಣ್ಣು ಮೂಡುತೋನ್ಸೆ ನಿವಾಸಿ ಗುಂಡಪ್ಪ ಪೂಜಾರಿ ಅವರು ಬೆಳಗ್ಗೆ ಕೆಮ್ಮಣ್ಣುವಿನ ಹಾಲು ಡೈರಿಯಿಂದ ವಾಪಸ್ಸು ಮನೆಗೆ ನಡೆದುಕೊಂಡು ಹೋಗುವಾಗ ಮನೆಯ ಸಾಕು ನಾಯಿ ಹಿಂಬಾಲಿಸಿಕೊಂಡು ಬರುತ್ತಿತ್ತು. ಕೆಮ್ಮಣ್ಣು ನಿಡಂಬಳ್ಳಿ ಕಲ್ಯಾಣಪುರ ಸಾರ್ವಜನಿಕ ರಸ್ತೆಯಲ್ಲಿ ನಾಯಿ ಮತ್ತು ಮಾಲೀಕರು ಸಾಗುತ್ತಿದ್ದರು.

ಈ ವೇಳೆ ನಿಡಂಬಳ್ಳಿ ನಿವಾಸಿ ಬ್ರಾನ್ ಡಿಸೋಜ ತನ್ನ ಮನೆಯ ಎದುರು ರಸ್ತೆಯ ಬದಿಯಲ್ಲಿ ನಿಂತುಕೊಂಡು, ಕೈಯಲ್ಲಿದ್ದ ಏರ್ ಗನ್ ನಿಂದ ಸಾಕು ನಾಯಿಗೆ ಶೂಟ್ ಮಾಡಿದ್ದಾರೆ. ಪರಿಣಾಮ ನಾಯಿ ಸಾವನ್ನಪ್ಪಿದೆ. ಈ ಬಗ್ಗೆ ಗುಂಡಪ್ಪ ಪೂಜಾರಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಬ್ರಾನ್ ಡಿಸೋಜರನ್ನು ಬಂಧಿಸಿದ್ದಾರೆ. ಮೃತ ಶ್ವಾನದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ, ಅದನ್ನು ದಫನ್ ಮಾಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss