Monday, July 4, 2022

Latest Posts

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಕಸದ ತೊಟ್ಟಿಗೆ ಅನ್ನ ಎಸೆಯುವ ದೃಶ್ಯ: ಘಟನೆಗೆ ವ್ಯಾಪಕ ಖಂಡನೆ

ಸುಬ್ರಹ್ಮಣ್ಯ: ಕೊರೋನಾ ಲಾಕ್‌ಡೌನ್‌ನಿಂದ ನಿರಾಶ್ರಿತರಾದ ಕಾರ್ಮಿಕರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಒದಗಿಸಿದ ಅನ್ನವನ್ನು ಕಾರ್ಮಿಕರು ರಾಶಿ ರಾಶಿಯಾಗಿ ಕಸದ ತೊಟ್ಟಿಗೆ ಎಸೆಯುವ ಮೂಲಕ ಅಮಾನವೀಯ ವರ್ತನೆ ದೃಶ್ಯದ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ, ಭಕ್ತರು ಭಕ್ತಿಯಿಂದ ಪೂಜಿಸಿ ಸೇವಿಸುವ ಭೋಜನ ಪ್ರಸಾದವನ್ನು ಎಸೆಯುವ ಕಾರ್ಮಿಕರ ಮನಸ್ಥಿತಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಷ್ಟದ ಪರಿಸ್ಥಿತಿಯಲ್ಲಿದ್ದ ಕಾರ್ಮಿಕರಿಗೆ ಆಶ್ರಯ ನೀಡಿದ ಶ್ರೀ ದೇವಳದ ಪ್ರಸಾದ ಭೋಜನವನ್ನು ಎಸೆದಿರುವ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss