Sunday, August 14, 2022

Latest Posts

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಯುವಕನ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ

ಹೊಸದಿಗಂತ ವರದಿ,ಮೈಸೂರು

ವಾಹನ ತಪಾಸಣೆ ನೆಪದಲ್ಲಿ ಯುವಕನೊಬ್ಬನಿಗೆ ಪೊಲೀಸರು ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.

ಮೈಸೂರಿನ ಹೆಬ್ಬಾಳು ಹೆಬ್ಬಾಳು ಇನ್ಫೋಸಿಸ್ ರಸ್ತೆಯಲ್ಲಿ ವಾಹನ ತಪಾಸಣೆಯ ವೇಳೆ ಯುವಕನಿಗೆ ಪೊಲೀಸರು ದೇಹದಿಂದ ರಕ್ತ ಸುರಿಯಂತೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದ್ದು, ಈ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆಯಲ್ಲದೇ, ಪೊಲೀಸರ ದೌರ್ಜನ್ಯ ಚರ್ಚೆಗೆ ಗ್ರಾಸವಾಗಿದೆ.

ಬುಧವಾರ ಮಧ್ಯಾಹ್ನದ ಹೆಬ್ಬಾಳು ಇನ್ಫೋಸಿಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು, ವಾಹನದಲ್ಲಿ ತೆರಳುತ್ತಿದ್ದ ಯುವಕನೊಬ್ಬನಿಗೆ ತಲೆಯ ಹಿಂಭಾಗಕ್ಕೆ ಥಳಿಸಿದ್ದಾರೆ. ಏಕಾಏಕಿ ತಮಗೆ ಹೊಡೆದ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆ ಯುವಕ, ಅವರನ್ನು ಪ್ರಶ್ನಿಸುತ್ತಾನೆ. ನಾನು ನಿಮಗೆ ಚಾಲನಾ ಪರವಾನಗಿ ತೋರಿಸಿಲ್ಲವಾ? ಇನ್ಶುರೆನ್ಸ್ ಇಲ್ಲವಾ? ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ದೇನಾ? ಮತ್ಯಾಕೆ ನನಗೆ ರಕ್ತ ಬರುವ ಹಾಗೆ ಹೊಡೆದಿದ್ದೀರಿ ಎಂದು ಕೇಳುತ್ತಾನೆ. ಯುವಕ ದಬಾಯಿಸಲು ಮುಂದಾದಾಗ ಪೊಲೀಸರು ಆತನನ್ನು ಪಕ್ಕಕ್ಕೆ ಕರೆದೊಯ್ಯುತ್ತಾರೆ.

ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಈ ದೃಶ್ಯವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣಕ್ಕೆ ಹಾಕಿದ್ದಾರೆ. ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss