ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ನೀಡಲಾಗದ ಪರಿಸ್ಥಿತಿ ಉಂಟಾಗಿದೆ. ಆದರೆ ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ಸಂಸ್ಥೆಗಳ ಸಮಸ್ತ ಅಧಿಕಾರಿ ಮತ್ತು ಸಿಬ್ಬಂದಿಗಳ ಒಂದು ದಿನದ ವೇತನ ನೀಡಲಾಗಿದೆ.
ಕಳೆದ ಎರಡು ತಿಂಗಳುಗಳಿಂದ ಸಾರಿಗೆ ನಿಗಮಗಳಲ್ಲಿ ಯಾವುದೇ ಬಸ್ ಕಾರ್ಯಚರಣೆ ಆಗದೆ, ನಿಗಮಗಳ ಆದಾಯ ಸಂಪೂರ್ಣ ನಿಂತಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾರಗೆ ಇಲಾಖೆಯಲ್ಲಿ ವೇತನ ನೀಡಲೂ ಹಣವಿಲ್ಲದಂತಹ ಸ್ಥಿತಿಗೆ ತಲುಪಿದ್ದು, ಸಾರಿಗೆ ನಿಗಮಗಳಿಗೆ, ಇದೇ ಮೊದಲ ಬಾರಿಗೆ ಸಾರಿಗೆ ನಿಗಮಗಳ ಇತಿಹಾಸದಲ್ಲಿ, ಸರ್ಕಾರವು ಸಾರಿಗೆ ನಿಗಮಗಳ ಸಿಬ್ಬಂದಿಗಳ ವೇತನಕ್ಕೆ ಹಣ ಬಿಡುಗಡೆ ಮಾಡಿ ಸಾರಿಗೆ ಸಂಸ್ಥೆಗಳ ವೇತನ ನೀಡಿದೆ.
ಸರ್ಕಾರದ ವತಿಯಿಂದ ನೌಕರರ ಒಂದು ತಿಂಗಳ ವೇತನ ಬಿಡುಗಡೆ ಮಾಡಿದ್ದು, ಮೊತ್ತ ರೂ.9,85,09,228/- ಗಳನ್ನು ಮಾನ್ಯ ಮುಖ್ಯಮಂತ್ರಿಗಳ ‘ಕೊವಿಡ್ ಪರಿಹಾರ ನಿಧಿ’ಗೆ ಚೆಕ್ ಮೂಲಕ ಉಪಮುಖ್ಯಮಂತ್ರಿ ಸಾರಿಗೆ ಇಲಾಖೆಯ ಲಕ್ಷ್ಮಣ ಸವದಿ ಅವರು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ,ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಭಾಸೇ, ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರು ಶಿವಯೋಗಿ ಸಿ.ಕಳಸದ ಭಾಸೇ, ಭಾಪೊಸೇ ನಿರ್ದೇಶಕರು ಡಾ.ರಾಮ್ ನಿವಾಸ್ ಸಪೆಟ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.