Wednesday, July 6, 2022

Latest Posts

ಸಾರಿಗೆ ಬಸ್-ಟಂಟಂ ನಡುವೆ ಮುಖಾಮುಖಿ ಡಿಕ್ಕಿ: ಓವ೯ ಸಾವು, 8 ಜನರಿಗೆ ಗಾಯ

ಹೊಸದಿಗಂತ ವರದಿ, ಕಲಬುರಗಿ:

ಸಾರಿಗೆ ಬಸ್ ಹಾಗೂ ಟಂಟಂ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು, ಎಂಟು ಜನರು ಗಂಭೀರ ಗಾಯಗೊಂಡ ಘಟನೆ ಚಿತ್ತಾಪುರ ತಾಲೂಕಿನ ರಾವೂರ ಬಳಿ ನಡೆದಿದೆ.

ಚಿತ್ತಾಪುರ ತಾಲೂಕಿನ ಡೊಣಗಾಂವ ಗ್ರಾಮದ ನಿವಾಸಿ ಶರಣಪ್ಪ ಮಾಲಿ ಪಾಟೀಲ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಡೊಣಗಾಂವದಿಂದ ಟಂಟಂ ಜೇವರ್ಗಿ ತಾಲೂಕಿನ ನರಬೋಳಿಗೆ ಹೊರಟಿತ್ತು. ಬಸ್ ಜೇವರ್ಗಿಯಿಂದ ಚಿತ್ತಾಪುರಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss