Monday, August 8, 2022

Latest Posts

 ಸಾರ್ವಜನಿಕರು ಮನೆಯಲ್ಲೇ ಇದ್ದು ಹಬ್ಬವನ್ನು ಆಚರಣೆ ಮಾಡಿ: ಜಿಲ್ಲಾಧಿಕಾರಿ ಆರ್. ಲತಾ

ಚಿಕ್ಕಬಳ್ಳಾಪುರ: ಸಾಲು ಸಾಲು  ಹಬ್ಬಗಳು ಬರುತ್ತಿರುವುದುದರಿಂದ ಸಾರ್ವಜನಿಕರು ಹಬ್ಬಗಳನ್ನು ಮನೆಯಲ್ಲೆ ಆಚರಿಸಿ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಆರ್. ಲತಾ ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಬಕ್ರೀದ್ ಹಬ್ಬ ಮತ್ತು ವರಮಹಾಲಕ್ಷೀ ಹಬ್ಬ ಬರುತ್ತಿರುವುದರಿಂದ ಎಂದಿನಂತೆ ಜನರು ಹೆಚ್ಚಾಗಿ ದೇವಸ್ಥಾನಕ್ಕೆ ತೆರಳುತ್ತಾರೆ ಆದರೆ ಈ ಭಾರಿ ಕೊರೋನಾ ಆವಳಿ ಹೆಚ್ಚಿರುವುದರಿಂದ ಸಾರ್ವಜನಿಕರು ತಮ್ಮ  ಮನೆಯಲ್ಲಿ ಹಬ್ಬಗಳನ್ನು ಆಚರಣೆ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
ಬಕ್ರೀದ್ ಹಬ್ಬದ ಆಚರಣೆ ವಿಚಾರವಾಗಿ ಹಾಗೂ ಕೊರೋನಾ ಮುಂಜಾಗ್ರತ ಕ್ರಮವಾಗಿ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರ ಜೊತೆ ವೀಡಿಯೋ ಸಂವಾದವನ್ನು ನಡೆಸಿದ್ದೇವೆ, ಸಾಲು ಸಾಲು ಹಬ್ಬಗಳು ಪ್ರಾರಂಭವಾಗುತ್ತಿರುವುದರಿಂದ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು, ಮನೆಯಲ್ಲೆ ಹಬ್ಬವನ್ನು ಆಚರಣೆ ಮಾಡಿ ಎಂದು ಹೇಳಿದರು.
ವರಮಹಲಕ್ಷೀ ಹಬ್ಬ ಆಚರಣೆ ಮಾಡಲು ಮಹಿಳೆಯರು ತುಂಬ ಉತ್ಸಾಹದಿಂದ ತಾಯಾರಿಯನ್ನು ನಡೆಸಿರುತ್ತಾರೆ ಆದರೆ ಪರಿಸ್ಥಿತಿಗಳು ಬದಲಾವಣೆಯಾಗಿರುವುದರಿಂದ ಮಹಿಳೆಯರು ಈ ಬಾರಿ ಹಬ್ಬವನ್ನು ಹೊರಗಡೆಹೋಗದೆ ಮನೆಯಲ್ಲೆ ಆಚರಣೆಯನ್ನು ಮಾಡಿ ಮುಂದಿನ ದಿನಗಳಲ್ಲಿ ನಮ್ಮ ಜೀವನ ಒಳ್ಳೆಯ ಪರಿಸ್ಥಿತಿಯಲ್ಲಿ ಸಾಗಲು ಸಹಾಯವಾಗುತ್ತದೆ ಆದ್ದರಿಂದ ಎಲ್ಲಾ ಹಬ್ಬಗಳನ್ನು ಮನೆಯಲ್ಲೆ ಆಚರಣೆ ಮಾಡುವು ಮೂಲಕ ಕೋರೊನಾ ನಿಯಂತ್ರಣ ಮಾಡಲು ಸಹಾಯವಾಗುತ್ತದೆ ಎಂದರು.
ಹಬ್ಬದ ಸಡಗರ ಹೆಚ್ಚು ಇರುವುದರಿಂದ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಅಗತ್ಯ ಸಾಮಾಗ್ರಿಗಳನ್ನು ಕೊಂಡು ಕೊಳ್ಳಲು ಮುಂದಾಗುತ್ತಾರೆ ಆದ್ದರಿಂದ ದೊಡ್ಡದಾದ ಮಾರುಕಟ್ಟೆ ಪ್ರದೇಶಗಳನ್ನು ತೆಗೆದಿರುತ್ತಾರೆ ಅಲ್ಲಿ ಜನಜಂಗುಳಿ ಕಡಿಮೆ ಮಾಡುವ ಮುಖಾಂತರ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸುವ ಮುಖಾಂತರ ಸಾಮಾಗ್ರಿಗಳನ್ನು ಕೊಂಡುಕೊಳ್ಳಬೇಕು ಎಂದು ಸೂಚಿಸಿದರು.
ಸಾರ್ವನಿಕರು ತಮ್ಮ ತಮ್ಮ ಸ್ಥಳಗಳಲ್ಲಿ ಸುಚಿತ್ವವನ್ನು ಕಾಪಾಡಿ ಕಡ್ಡಾಯವಾಗಿ ಮುಖಗವಸು (ಮಾಸ್ಕ್), ಸಾಮಾಜಿಕ ಅಂತರವನ್ನು ಕಾಪಾಡಿ  ಸಾರ್ವಜನಿಕರ ಸಹಕಾರವು ಮುಖ್ಯವಾಗಿರುತ್ತದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss