Monday, July 4, 2022

Latest Posts

ಸಾರ್ವಜನಿಕ ಗಣೇಶೋತ್ಸವ ಆಚರಣೆ: ಮಹಾರಾಷ್ಟ್ರ ಮಾದರಿಯಲ್ಲಿ ಅನುಮತಿ ನೀಡಲಿ!

ಧಾರವಾಡ: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಸರ್ಕಾರದ ನಿಷೇಧ ಹೇರಿಕೆ ಖಂಡಿಸಿ ಹಾಗೂ ಮಹಾರಾಷ್ಟ ರಾಜ್ಯ ಮಾದರಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಆಧ್ಯಾತ್ಮಿಕ ಚಿಂತಕ ಪ್ರಶಾಂತ ರಾಜಗುರು ಸೋಮವಾರ ಮನವಿ ಸಲ್ಲಿಸಿದರು.
ಕೊರೋನಾ ಹಿನ್ನಲೆ ಸಾರ್ವಜನಿಕ ಗಣೇಶೋತ್ಸವ ನಿಷೇಧ ಕೋಟ್ಯಾಂತರ ಹಿಂದುಗಳ ಭಾವನೆಗಳ ಧಕ್ಕೆ ತರಲಿದೆ. ಅಲ್ಲದೇ, ದೇಶದ ಐಕ್ಯತೆಗೆ ನೂರಾರು ವರ್ಷಗಳ ಹಿಂದೆ ಬಾಲಗಂಗಾಧರ ತಿಲಕರು ಆಚರಣೆಗೆ ತಂದ ಸಂಪ್ರದಾಯಕ್ಕೂ ಹಾಗೂ ಅವರಿಗೆ ಅವಮಾನ ಮಾಡಿದಂತಾಗಲಿದೆ ಎಂದು ಅಭಿಪ್ರಾಯಟಪ್ಟರು.
ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕೆಲ ನಿರ್ಬಂಧಗಳು ಮೂಲಕ ಸರ್ಕಾರ ಉತ್ಸವದ ಆಚರಣೆಗೆ ಅನುಮತಿ ನೀಡಿದೆ. ಸೋಂಕು ನಿಯಂತ್ರಣದಲ್ಲಿರುವ ಕರ್ನಾಟಕದಲ್ಲಿ ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ ಸರ್ಕಾರ ಗಣಪತಿ ಮಂಡಳಿಗಳು ಮಂಟಪದಲ್ಲಿ ಆರತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಡೆಯುವ ಸಮಯದಲ್ಲಿ ಜನಸಂದಣಿ ತಡೆ, ಮೂರ್ತಿ ತರುವಾಗ ಹಾಗೂ ಕಳುಹಿಸುವಾಗ 10ಕ್ಕಿಂತ ಹೆಚ್ಚು ಜನರಿಗೆ ಅವಕಾಶ ನಿಷೇಧ. ಬೃಹತ್ ಗಣೇಶ ಮಂಡಳಿಗಳು ಹೆಚ್ಚಿನ ಜನಸಂದಣಿಗೆ ಅವಕಾಶ ನೀಡದೆ, ಆನ್‌ಲೈನ್ ದರ್ಶನದ ವ್ಯವಸ್ಥೆ ಕಲ್ಪಿಸಿದೆ ಎಂದರು.
ಮೆರವಣಿಗೆ ವೇಳೆ ಮಕ್ಕಳು ಹಾಗೂ ವೃದ್ಧರು ಸೇರಿದಂತೆ, ಅಪಾರ್ಟಮೆಂಟ್‌ಗಳಲ್ಲಿ ಹಾಗೂ ಮನೆಗಳಲ್ಲಿ ಇಡುವ ಗಣೇಶಗಳನ್ನು ಒಂದೇ ಬಾರಿ ಮೆರವಣಿಯಲ್ಲಿ ಕೊಂಡೊಯ್ಯದoತೆ, ಮನೆಗಳ ಗಣೇಶನನ್ನು ಕೃತಕ ಹೊಂಡದಲ್ಲಿ ಮನೆಗಳಲ್ಲಿ ವಿಸರ್ಜಸಲು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲಿಗೆ ಆರೋಗ್ಯ ಮಾಹಿತಿ, ರಕ್ತದಾನ ಶಿಬಿರ ಆಯೋಜನೆಗೆ ತಿಳಿಸಿದೆ ಎಂದರು.
ಉತ್ಸವ ನಿಷೇಧಿಸುವುದರಿಂದ ಗಣೇಶ ಮೂರ್ತಿ ತಯಾರಕರ ಬಾಳು ಬೀದಿಗೆ ಬರಲಿದ್ದು, ಲಕ್ಷಾಂತರೂ ಆರ್ಥಿಕ ನಷ್ಟವಾಗಲಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ಹಿಂದಿನ ಆದೇಶ ಹಿಂಪಡೆದು, ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂದು ವಿನಂತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss