ಬೀಜಿಂಗ್: ಕೊರೋನಾ ವೈರಸ್ ಗೆ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಒಟ್ಟು 722 ಮಂದಿ ಬಲಿಯಾಗಿದ್ದಾರೆ. 34,500 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಕೊರೋನಾ ವೈರಸ್ ತಡೆಗಟ್ಟಲು ಚೀನಾ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.
2002-2003ರಲ್ಲಿಕಾಣಿಸಿಕೊಂಡ ಸಾರ್ಸ್ ವೈರಸ್ ಗೆ 650 ಮಂದಿ ಬಲಿಯಾಗಿದ್ದರು. ಕೊರೋನಾ ವೈರಸ್ ನ ಗುಣ ಲಕ್ಷಣಗಳನ್ನೇ ಹೊಂದಿದ್ದ ಸಾರ್ಸ್ ವೈರಸ್ ಹೊಂದಿತ್ತು.
ಚೀನಾದಿಂದ 20 ಇತರೆ ದೇಶಗಳಿಗೂ ಈ ಮಾರಣಾಂತಿಕ ವೈರಸ್ ಹರಡಿದೆ. ಬುಧವಾರ ಜಪಾನಿನ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ 10 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿತ್ತು. ಈಗ ಆ ಸಂಖ್ಯೆ ಏರಿಕೆಯಾಗಿದ್ದು, ಒಟ್ಟು 64 ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
ಯಾಕೋಹಾಮಾ ಬಂದರಿನಲ್ಲಿ ಹಡಗನ್ನು ನಿಲ್ಲಿಸಲಾಗಿದೆ.