ಬೆಂಗಳೂರು: ಯಡಿಯೂರಪ್ಪ ಸರ್ಕಾರ ಸಾಲದ ಸುಳಿಗೆ ಸಿಲುಕಿದ್ದು, ರಾಜ್ಯ ಆರ್ಥಿಕ ದಿವಾಳಿಯಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಜ್ಯವನ್ನು ಸಾವಿನ ಸುಳಿಯಿಂದ ಹೊರತರಲು ಶೀಘ್ರ ಕಠೋರ ನಿರ್ದಾರಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದರು.
ಆದಾಯದ ಬಹುಪಾಲು ಬಾಬ್ತು ಸರ್ಕಾರಿ ನೌಕರರ ಸಂಬಳ, ಪಿಂಚಣಿಗೆ ಹೋಗುತ್ತಿದೆ. ಇದನ್ನು ಮೊದಲು ತಗ್ಗಿಸಬೇಕು. ಅನಗತ್ಯ ಹುದ್ದೆಗಳನ್ನು ತಕ್ಷಣ ರದ್ದು ಮಾಡಿ ಎಂದರು. ನಮ್ಮಲ್ಲಿ ಎಷ್ಟೊಂದು ಅನಗತ್ಯ ಹುದ್ದೆಗಳಿವೆ ಇವನ್ನೆಲ್ಲ ಸರಿಪಡಿಸಿಕೊಳ್ಳಲು ಇದು ಸುಸಮಯ ಎಂದರು. ಹಾಗೆ ಈ ಸಂಕಷ್ಟದ ಸಮಯದಲ್ಲಿ ವೇತನ ಹೆಚ್ಚಳ ಮಾಡಬೇಡಿ. ಕರ್ನಾಟಕದ ಆರ್ಥಿಕ ಶಿಸ್ತು ಇಲ್ಲಿಯವರೆಗೂ ಈ ರೀತಿ ಹದಗೆಟ್ಟಿರಲಿಲ್ಲ ಎಂದರು.