ಹೊಸ ದಿಗಂತ ವರದಿ, ಹಾವೇರಿ- ರಾಣೇಬೆನ್ನೂರ
ಸಾಲದ ಬಾಧೆ ತಾಳಲಾರದೆ ಜಿಲ್ಲೆಯ ಇಬ್ಬರು ರೈತರು ಒಂದೇ ದಿನ ಪ್ರತ್ಯೇಕ ಘಟನೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಿಟ್ಟೂರ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಅದೇ ಗ್ರಾಮದ ಮಂಜಪ್ಪ ಬಸಪ್ಪ ಕರಿಯಪ್ಪನವರ (40) ಹಾಗೂ ಮಹೇಶ ಬಸಪ್ಪ ಪರಸಳ್ಳಿ (38) ಎಂದು ಗುರುತಿಸಲಾಗಿದೆ.
ಮಂಜಪ್ಪನು ಬ್ಯಾಂಕಿನಲ್ಲಿ 2 ಲಕ್ಷ ಹಾಗೂ ಕೈಗಡ 5 ಲಕ್ಷ ಒಟ್ಟು 8 ಲಕ್ಷ ಸಾಲಮಾಡಿದ್ದ ಹಾಗೂ ಮಹೇಶ ಕೂಡಾ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಾಡಿಕೊಂಡಿದ್ದ. ಅತಿ ವೃಷ್ಠಿಯಿಂದ ಬೆಳೆ ಸರಿಯಾಗಿ ಬಾರದೆ ಇದ್ದ ಕಾರಣ ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.