spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾವರ್ಕರ್ ರ ವೀರತ್ವ ಪ್ರಶ್ನಿಸಿದ ಕಾಂಗ್ರೆಸ್!

- Advertisement -Nitte

ಮಧ್ಯ ಪ್ರದೇಶ: ವಿನಾಯಕ್ ದಾಮೋದರ್ ಸಾವರ್ಕರ್ ಮತ್ತು ನಾತುರಾಮ್ ಗೋಡ್ಸೆ ನಡುವೆ ಲೈಂಗಿಕ ಸಂಪರ್ಕವಿದೆ ಎಂದು ಮಧ್ಯ ಪ್ರದೇಶದ ಕಾಂಗ್ರೆಸ್ ಕಿರುಪುಸ್ತಕ ಹೊರ ತಂದಿದೆ.

ಜನವರಿ 2ರಂದು ಪ್ರಕಟಿಸಿದ ಕಿರುಪುಸ್ತಕದಲ್ಲಿ ಸಾವರ್ಕರ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಹಿಂದೂ ಮಹಾ ಸಭೆಯ ಸಹ ಸಂಸ್ಥಾಪಕರಾದ ಸಾವರ್ಕರ್ ಅವರಿಗೆ ನಾತುರಾಮ್ ಗೋಡ್ಸೆಯೊಂದಿಗೆ ದೈಹಿಕ ಸಂಬಂಧವಿದೆ ಎಂದು ಪ್ರಕಟಿಸಲಾಗಿದೆ.

ಪುಸ್ತಕದಲ್ಲಿ ಭಾರತೀಯ  ಸ್ವಾತಂತ್ರದ ಸಮಯದಿಂದಲೂ ಹಿಂದೂ ಮಹಾ ಸಭೆಯನ್ನು ವಿರೋಧಿಸುತ್ತಿರುವ ಬಗ್ಗೆ ಉಲ್ಲೇಖವಿದ್ದು, ಬಿಜೆಪಿ ಕಾರ್ಯಕರ್ತರು ಈ ರೀತಿಯಾದಂತಹ ಹೇಳಿಕೆಗಳಿಗೆ ಕ್ಷಮೆ ಕೇಳಬೇಕೆಂದು ಮಧ್ಯಪ್ರದೇಶದಲ್ಲಿ ಪ್ರತಿಭಟಿಸುತ್ತಿದ್ದಾರೆ. ಈ ಪುಸ್ತಕಗಳನ್ನು ಮಾರಟಕ್ಕೆ ಇರಿಸಿದ್ದುದ್ದು, ಇದೀಗ 500ಕ್ಕು ಹೆಚ್ಚು ಪ್ರತಿಗಳು ಮಾರಾಟವಾಗಿವೆ.

ಪುಸ್ತಕದ ಹೆಸರು ಸಾವರ್ಕರ್ ಅವರ ವೀರತ್ವವನ್ನು ಪ್ರಶ್ನಿಸುವ ಪರಿಯಲ್ಲಿದ್ದು “ವೀರ್ ಸಾವರ್ಕರ್ ಕಿತ್ನೆ ವೀರ್?”( ವೀರ್ ಸಾವರ್ಕರ್ ಎಷ್ಟು ವೀರ?) ಎಂದು ಸಾವರ್ಕರ್ ಅವರನ್ನು ಹೀಯಾಳಿಸಿದ್ದಾರೆ. ಸಾವರ್ಕರ್ 12ವರ್ಷದ ಬಾಲಕನಿದ್ದಾಗ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನುವುದ್ದನ್ನು ಹೇಳಿದ್ದಾರೆ.

ಮುಸಲ್ಮಾನ ಯುವತಿಯರನ್ನು ಅತ್ಯಾಚಾರ  ಮಾಡುವಂತೆ ಸಾವರ್ಕರ್ ಯುವಕರನ್ನು  ಪ್ರೇರೇಪಿಸುತ್ತಿದ್ದು, ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಸಲ್ಲಿಸಿದ ನಂತರ ಜೈಲಿನಿಂದ ಬಿಡುಗಡೆಯಾದರು ಎಂದು ಪ್ರಕಟಿಸಲಾಗಿದೆ. ಇದಕ್ಕೆ ವಿರೋಧಿಸಿದ  ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಮೇಶ್ವ ಶರ್ಮ “ 1990ರಲ್ಲಿ ಕಾಂಗ್ರೆಸ್ ನಾಯಕ ತನ್ನ ಪತ್ನಿಯನ್ನೆ ಹತ್ಯೆ ಮಾಡಿರುವ ಪಕ್ಷದವರಿಂದ ಿನ್ನು ಯಾವ ರೀತಿಯಾದ ಮಾತುಗಳನ್ನು ಬಯಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss