ಸಾವಿರ ಗಡಿ ದಾಟುತ್ತಿರುವ ಕೊರೋನಾ ಪೀಡಿತರ ಸಂಖ್ಯೆ: ಸೋಂಕಿನ ದಾಳಿಗೆ ಸಾವು ಉಲ್ಬಣ

0
25

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ 1105 ಆಗಿದ್ದು, ಸೋಂಕಿತರ ಸಂಖ್ಯೆ 14,295ಕ್ಕೆ ಏರಿ 19 ಜನ ಮೃತಪಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಎಗ್ಗಿಲ್ಲದೆ ಏರಿಕೆಯಾಗುತ್ತಿ ರುವ ಮಹಾಮಾರಿ ಮತ್ತೆ 738 ಪ್ರಕರಣ ಪತ್ತೆ ಯಾಗಿದ್ದು, ಒಟ್ಟು 4052 ಆಗಿದೆ.

ಒಂದೇ ದಿನ 177 ಮಂದಿ ಗುಣಮುಖರಾಗಿದ್ದು, ಈವರೆಗೆ ೭೬೮೩ ಸೋಂಕಿ ತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು 6382 ಸಕ್ರಿಯ ಪ್ರಕರಣ ಗಳಿದ್ದು, ಅದರಲ್ಲಿ 268 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದೆ. ಸೋಮವಾರ 70 ಜನರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗಿದ್ದು, 12,842 ಜನರ ಮೇಲೆ ನಿಗಾ ಇಡಲಾಗಿದ್ದು, ಅದರಲ್ಲಿ 23,562  ಪ್ರಥಮ ಸಂಪರ್ಕಿತರು ಹಾಗೂ 19,258  ದ್ವಿತೀಯ ಸಂಪರ್ಕಿತರಾಗಿದ್ದಾರೆ.

ಕೊರೋನಾ ಕೇಕೆ : ಒಂದೇ ದಿನ 19 ಮಂದಿ ಮಹಾಮಾರಿಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 226 ತಲುಪಿರುವುದು ಆತಂಕ ಹೆಚ್ಚಿಸುತ್ತಿದೆ. ಬಳ್ಳಾರಿಯಲ್ಲಿ ಒಂದೇ ದಿನ 12 ಜನರು ಮೃತಪಟ್ಟಿzರೆ. ಉಳಿದಂತೆ  ಬೆಂಗಳೂರು ನಗರ ಜಿ 04, ಬಾಗಲಕೋಟೆ, ದಕ್ಷಿಣ ಕನ್ನಡ ಹಾಗೂ ಹಾಸನ ಜಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಎಲ್ಲರೂ ತೀವ್ರ ಉಸಿರಾಟದ ತೊಂದರೆ, ಜ್ವರ ಮತ್ತು ಕೆಮ್ಮು ರೋಗದಿಂದ ನರಳುತ್ತಿದ್ದರು.

ಜಿವಾರು ವಿವರ: ಬೆಂಗಳೂರು ನಗರ 738, ಬಳ್ಳಾರಿ 76, ದಕ್ಷಿಣ ಕನ್ನಡ 32, ಬೀದರ್ 28, ಉತ್ತರ ಕನ್ನಡ 24, ಕಲಬುರಗಿ 23, ಹಾಸನ 22, ವಿಜಯಪುರ 22, ತುಮಕೂರು 18, ಉಡುಪಿ 18, ಧಾರವಾಡ 17, ಚಿಕ್ಕಮಗಳೂರು 17, ಚಿಕ್ಕಬಳ್ಳಾಪುರ 15, ಯಾದಗಿರಿ 09, ಮಂಡ್ಯ 08, ಮೈಸೂರು 06, ಶಿವಮೊಗ್ಗ 05, ರಾಯಚೂರು 04, ಬಾಗಲಕೋಟೆ 04, ಗದಗ 04, ಕೋಲಾರ 04, ಬೆಂಗಳೂರು ಗ್ರಾಮಾಂತರ 03, ದಾವಣಗೆರೆ 02, ರಾಮನಗರ 02, ಚಿತ್ರದುರ್ಗ 02, ಹಾವೇರಿ 01 ಹಾಗೂ ಕೊಡಗು 01 ಪ್ರಕರಣ ವರದಿಯಾಗಿವೆ.

LEAVE A REPLY

Please enter your comment!
Please enter your name here