ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾವಿರ ವರ್ಷಗಳ ಹಿಂದಿನ ಕಲ್ಯಾಣ ಚಾಲುಕ್ಯರ ಕಾಲದ ತಾಮ್ರ ಶಾಸನ ಪತ್ತೆ!

ಹೊಸದಿಗಂತ ವರದಿ, ಅಂಕೋಲಾ:

ಇಲ್ಲಿನ ಕುಂಬಾರಕೇರಿಯಲ್ಲಿರುವ ಪುರಾತನ ಕದಂಬೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಎರಡು ತಾಮ್ರ ಶಾಸನಗಳು ಪತ್ತೆಯಾಗಿವೆ.

ದೇವಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಮಣ್ಣು ಎತ್ತುವಾಗ ದೊರಕಿದ ಶಾಸನಗಳನ್ನು ಸಮಿತಿಯ ಅಧ್ಯಕ್ಷ ವಿಠ್ಠಲರಾವ್ ವೆರ್ಣೇಕರ್ ಅವರು ಸ್ವಚ್ಚಗೊಳಿಸಿ ಶಾಸನಗಳ ಕುರಿತು ಅಧ್ಯಯನ ನಡೆಸುತ್ತಿರುವ ಶ್ಯಾಮಸುಂದರ ಗೌಡ ಅವರ ಗಮನಕ್ಕೆ ತಂದಾಗ  ಇವುಗಳು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಾಗಿದ್ದು, ಕ್ರಿಸ್ತ ಶಕೆ 975 ರಲ್ಲಿ ಬರೆಯಲ್ಪಟ್ಟಿದ್ದು ಇಂದಿಗೆ 1046 ವರ್ಷಗಳ ಹಿಂದಿನದ್ದು ಎಂದು ತಿಳಿದುಬಂದಿದೆ.

ಶಾಸನದಲ್ಲೇನಿದೆ?: ದೊರಕಿದ ಶಾಸನಗಳಲ್ಲಿ ಒಂದರಲ್ಲಿ ಕಲ್ಯಾಣ ಚಾಲುಕ್ಯರ ಎರಡನೇ ತೈಲಪರ ಕುರಿತು ಉಲ್ಲೇಖವಿದ್ದು, ಶಾಲಿವಾಹನ ಶಖೆ 897, ಭಾದ್ರಪದ ಮಾಸ, ಆದಿತ್ಯವಾರ, ಅಮವಾಶೆ ಎಂದು ಬರೆಯಲಾಗಿದ್ದು ಇದರ ಮುಂದುವರಿದ ಭಾಗದ ತಾಮ್ರ ಶಾಸನ ಬೇರೆ ತಾಮ್ರಪತ್ರದಲ್ಲಿ ಬರೆದಿದ್ದು ಅದು ಪತ್ತೆಯಾಗಬೇಕಿದೆ.

ಇಲ್ಲಿ ದೊರೆತ ಇನ್ನೊಂದು ತಾಮ್ರ ಶಾಸನ ಭಿನ್ನವಾಗಿದ್ದು ಅದರಲ್ಲಿ ಬರೆದಿರುವುದು ಸ್ಪಷ್ಟವಾಗಿ ಕಾಣುತ್ತಿಲ್ಲ ಆದ್ದರಿಂದ ಅದನ್ನು ಸ್ವಚ್ಚಗೊಳಿಸಿ ಓದುವುದಾಗಿ ಶ್ಯಾಮಸುಂದರ ಗೌಡ ಹೇಳಿದ್ದಾರೆ.

ಕದಂಬೇಶ್ವರಕ್ಕೆ ಚಾಲುಕ್ಯರ ಕೊಡುಗೆ: ಕ್ರಿಸ್ತ ಶಕೆ 973 ರಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆ ಆರಂಭವಾಗಿದ್ದು 1190ರ ವರೆಗೆ ಮುಂದುವರೆದಿದೆ ಇದರ ಸಂಸ್ಥಾಪಕ ದೊರೆ ಎರಡನೇ ತೈಲಪ ಕ್ರಿ.ಶ 997ರವರೆಗೆ ಆಳ್ವಿಕೆ ನಡೆಸಿದ  ಎಂದು ಇತಿಹಾಸದ ಅಧ್ಯಯನದಿಂದ ತಿಳಿದು ಬರುತ್ತಿದೆ .

ಕದಂಬರಿಂದ ನಿರ್ಮಾಣವಾದ ಕದಂಬೇಶ್ವರ ದೇವಾಲಯವನ್ನು , ಕಲ್ಯಾಣ ಚಾಲುಕ್ಯರು ತಮ್ಮ ಶೈಲಿಯಲ್ಲಿ ಅಭಿವೃದ್ಧಿಗೊಳಿಸಿದ್ದರು ಎನ್ನುವುದಕ್ಕೆ ಅವರ ಆಳ್ವಿಕೆಯ ಆರಂಭದ ಕಾಲದ ತಾಮ್ರ ಶಾಸನ ಆಧಾರವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss