Friday, July 1, 2022

Latest Posts

ಸಾವಿರಾರು ವಿದೇಶಿ ನೌಕರರಿಗೆ ಸಂಕಷ್ಟ: ವಲಸೆ ನೀತಿಗಳಿಗೆ ಸಂಬಂಧಿಸಿದ ನಿಷೇಧ ಮುಂದೂಡಿಕೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ವಲಸೆ ನೀತಿಗಳಿಗೆ ಸಂಬಂಧಿಸಿದ ನಿಷೇಧವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದುವರಿಸಿದ್ದಾರೆ.
ದೇಶದ ಆರ್ಥಿಕತೆ ಕುಸಿದಿರುವ ಸಂದರ್ಭದಲ್ಲಿ ದೇಶದ ನಾಗರಿಕರನ್ನು ರಕ್ಷಿಸಲು ವಲಸೆ ನೀತಿಗಳಿಗೆ ಸಂಬಂಧಿಸಿದ ನಿಷೇಧವನ್ನು ಮುಂದುವರಿಸಿದ್ದಾರೆ.
ಇದರಿಂದ ಹಲವು ಗ್ರೀನ್ ಕಾರ್ಡ್ ಅರ್ಜಿದಾರರಿಗೆ ಮತ್ತು ತಾತ್ಕಾಲಿಕ ವಿಸಾ ಪಡೆದು ಅಮೆರಿಕಕ್ಕೆ ಹೋದವರಿಗೆ ತೊಂದರೆಯಾಗಲಿದೆ.
ಏಪ್ರಿಲ್,ಜೂನ್‌ನಲ್ಲಿ ಹೊರಡಿಸಲಾಗಿದ್ದ ಈ ನಿಷೇಧ ನೀತಿ ನಿನ್ನೆಗೆ ಮುಕ್ತಾಯವಾಗಿದ್ದು, ಆದರೆ ಟ್ರಂಪ್ ಅದನ್ನು ಮತ್ತೆ ಮಾ.31 ರವರೆಗೆ ಮುಂದುವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss