ಬೆಂಗಳೂರು: ಹಿರಿಯ ಸಾಹಿತಿ, ಸಂಶೋಧಕ ಎಂ.ಚಿದಾನಂದ ಮೂರ್ತಿ(ಚಿ.ಮೂ) ಇಂದು ಮುಂಜಾನೆ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯ ದಿಂದ ಬಳಲುತ್ತಿದ್ದ ಎಂ.ಚಿದಾನಂದಮೂರ್ತಿ ಇಂದು ಮುಂಜಾನೆ 3:45ರ ಸಮಯದಲ್ಲಿ ಅಗಲಿದ್ದಾರೆ.
10 ಮೇ 1931ರಂದು, ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನಲ್ಲಿ ಜನಿಸಿದ ಚಿ.ಮೂ ಅವರಿಗೆ 88 ವರ್ಷವಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿ.ಮೂ ಅವರ ಪಾತ್ರ ಅಭೂತಪೂರ್ವವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಉತ್ತಮ ಸ್ಥಾನ ಮಾನ ದೊರಕಿಸಲು ಹೋರಟ ಮಾಡಿದವರಲ್ಲಿ ಚಿ.ಮೂ. ಪ್ರಮುಖರು. ಹಂಪಿಯ ಅಸ್ಥಿತ್ವದ ರಕ್ಷಣಗೆ ಚಿ.ಮೂ ನಿರಂತರ ಹೋರಾಟ ನಡೆಸಿದರು. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ,ಆಲ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಲಭಿಸಿವೆ.
ಹಿರಿಯ ಸಾಹಿತಿಯ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ: ಶ್ರೀ ಚಿದಾನಂದ ಮೂರ್ತಿರವರು ಕನ್ನಡಕ್ಕಾಗಿ, ಕನ್ನಡದ ಘನತೆಯನ್ನು ಉಳಿಸುವುದಕ್ಕಾಗಿ ಶ್ರಮಿಸಿದ್ದಾರೆ. ವಿದ್ವಾಂಸರು, ಸಂಶೋಧಕರು, ಇತಿಹಾಸ ತಜ್ಞರು, ಹೋರಾಟಗಾರರು ಇನ್ನು ನೆನಪು ಮಾತ್ರ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಶ್ರೀ ವಿಶ್ವೇ ಪ್ರಸನ್ನ ತೀರ್ಥರು: ವಿದ್ವಾಂಸರು, ಹಿರಿಯ ಸಾಹಿತಿಗಳ ನಿಧನದಿಂದ ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಶ್ರೀ ಕೃಷ್ಣನ ಅನುಗ್ರಹದಿಂದ ಸಮಾಜ ಅವರ ಆಲೋಚನ ಅಡಿಯಲ್ಲಿ ಮುಂದುವರೆಯಲಿ ಎಂದರು.