Wednesday, August 10, 2022

Latest Posts

ಸಿಂಗಾಪುರದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತಂದ ಏರ್ ಕ್ರೂ: ಕರಾವಳಿ ಹುಡುಗಿ ಅಶ್ವಿನಿ

ಮಂಗಳೂರು: “ವಂದೇ ಭಾರತ್ ಮಿಷನ್ ” ಸಿಂಗಾಪುರದಲ್ಲಿ ಸಿಲುಕಿದ್ದ ಭಾರತೀಯನ್ನು ಬೆಂಗಳೂರಿಗೆ ಮರಳಿ ಕರೆತಂದ ಮೊದಲ‌ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿರ ಸಾರಥಿಯಾದ ಕರಾವಳಿ ಹುಡುಗಿ ಅಶ್ವಿನಿ ಮಂಗಳೂರು.

ಬೆಂಗಳೂರಿನಿಂದ ಮೊದಲ ಏರ್ ಇಂಡಿಯಾಕ್ಕೆ ಸೇರಿದ Ai 1378 – Aik 1379 ವಿಮಾನ ಸಿಂಗಾಪುರಕ್ಕೆ ತೆರಳಿ ಬುಧವಾರ ರಾತ್ರಿ 10 ಗಂಟೆಗೆ 152 ಭಾರತೀಯರನ್ನು ಮರಳಿ ಊರಿಗೆ ಕರೆತಂದಿದೆ.

ಈ ವಿಮಾನದಲ್ಲಿ ಏರ್ ಕ್ರೂ ಆಗಿ ಇದ್ದ ನಾಲ್ಕು ಜನರ ಪೈಕಿ ಕರಾವಳಿಯ ಬೆಡಗಿ ಅಶ್ವಿನಿ ಮಂಗಳೂರು ಇದ್ದರು ಎಂಬುದು ಕರಾವಳಿಯ ಜನತೆಗೆ ಹೆಮ್ಮೆಯ ಸಂಗತಿ. ಮಂಗಳೂರಿನ ಕೊಣಾಜೆ ಮೂಲಕ ಈ ಅಶ್ವಿನಿ, ಮಂಗಳೂರಿನಲ್ಲೇ ಶಿಕ್ಷಣ ಪೂರೈಸಿ, ಮೂರು ವರ್ಷಗಳಿಂದ ಏರ್ ಇಂಡಿಯಾ ದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ವಂದೇ ಭಾರತ್ ಮಿಷನ್ ಗೆ ನೂರು ಮಂದಿ ಕ್ರೂ ಗಳ ಪೈಕಿ ಈಕೆ ಆಯ್ಕೆಯಾಗಿದ್ದಾಳೆ.

ಅತೀ ಬಡತನದಲ್ಲಿ ಶಿಕ್ಷಣ ಪೂರೈಸಿದ ಈಕೆ ವಿದ್ಯಾರ್ಥಿ ಸಮಯದಲ್ಲಿ ಎಬಿವಿಪಿಯ ನಾಯಕಿಯಾಗಿದ್ದಳು, ಚಿಕ್ಕ ವಯಸ್ಸಿನಲ್ಲಿ ನಾಯಕತ್ವದ ಗುಣ ಬೆಳಸಿಕೊಂಡ ಅಶ್ವಿನಿ ಉತ್ತಮ ಭಾಷಣಗಾರ್ತಿಯೂ ಹೌದು. ಇಂದು ವಂದೇ ಭಾರತ್ ಮಿಷನ್ ನಲ್ಲಿ ಭಾಗವಹಿಸುವ ಮೂಲಕ ಕಠಿಣ ಪರಿಸ್ಥಿತಿಯಲ್ಲೂ ದೇಶದ ಹಿತಕ್ಕೆ ಶ್ರಮಿಸಿರುವುದು ಶ್ಲಾಘನೀಯ ಸಂಗತಿ. ಈ ಕರಾವಳಿಯ ಕೊರೊನಾ ವಾರಿಯರ್ ಗೆ ನಮ್ಮದೊಂದು ಸಲಾಂ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss