Thursday, August 11, 2022

Latest Posts

ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಯಾವುದೇ ಹಕ್ಕು ಮಂಡಿಸಿಲ್ಲ: ನಿತೀಶ್​ ಕುಮಾರ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಿಹಾರ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್​ ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಗೊಂದಲಕ್ಕೆ ನಿತೀಶ್​ ಕುಮಾರ್ ತೆರೆ ಎರೆದಿದ್ದು, ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಯಾವುದೇ ಹಕ್ಕು ಮಂಡಿಸಿಲ್ಲ. ಆ ನಿರ್ಧಾರವನ್ನು ಎನ್​ಡಿಎ ತೆಗೆದುಕೊಳ್ಳುತ್ತದೆ. ನಾಳೆ (ಶುಕ್ರವಾರ) ಎನ್​ಡಿಎ ಒಕ್ಕೂಟದ ಎಲ್ಲಾ ನಾಲ್ಕು ಪಕ್ಷಗಳ ಮುಖಂಡರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು.
ದೀಪಾವಳಿ ಅಥವಾ ಛತ್ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭ ಯಾವಾಗ ನಡೆಯಲಿದೆ ಎಂಬುದು ಇನ್ನೂ ನಿರ್ಧರಿಸಿಲ್ಲ. ಈ ಚುನಾವಣೆಯ ಫಲಿತಾಂಶವನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಎಲ್ಲಾ ನಾಲ್ಕು ಪಕ್ಷಗಳ ಸದಸ್ಯರನ್ನು ನಾಳೆ ಭೇಟಿಯಾಗಲಿದ್ದೇವೆ ಎಂದು ನಿತೀಶ್​ ಕುಮಾರ್ ತಿಳಿಸಿದ್ದಾರೆ.
ಆರ್​ಜೆಡಿ ನಾಯಕ ತೇಜಶ್ವಿ ಯಾದವ್ ಕೂಡ ನಿತೀಶ್ ಅವರ ಮೇಲೆ ವಾಗ್ದಾಳಿ ನಡೆಸಿ, ಜೆಡಿಯು ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ಆರ್​ಜೆಡಿ ಮತ್ತು ಬಿಜೆಪಿಯ ಹಿಂದಿದೆ. ಅವರಿಗೆ ಆತ್ಮಸಾಕ್ಷಿಯಿದ್ದರೆ, ನಿತೀಶ್ ಅವರು ಬೇರೆಯವರಿಗೆ ಕುರ್ಚಿ ಬಿಟ್ಟುಕೊಡಬೇಕು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss