Tuesday, July 5, 2022

Latest Posts

ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮಾನಹಾನಿ ಪೋಸ್ಟ್: ನಟಿ ಕಂಗನಾ ವಿರುದ್ಧ ಕೇಸ್ ದಾಖಲು

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅಸಭ್ಯ ಭಾಷೆಯಲ್ಲಿ ದೂಷಿಸಿದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬಾಂಬೆ ವಕೀಲ ನಿತಿನ್ ಮಾನೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂವಿ ಮಾಫಿಯಾವನ್ನು ರಾಜ್ಯ ಸರ್ಕಾರದೊಂದಿಗೆ ಥಳಕು ಹಾಕಿದ ಕಂಗನಾ ಪೋಸ್ಟ್ ಒಂದನ್ನು ಅವರು ದೂರಿನಲ್ಲಿ ದಾಖಲಿಸಿದ್ದು, ವಿಖ್ರೋಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ನ್ಯಾಯಾಲಯದ (ಐಪಿಸಿ) ಸೆಕ್ಷನ್ ೪೯೯ರ ಅಡಿಯಲ್ಲಿ ದೂರು ದಾಖಲಾಗಿದ್ದು, ಕ್ರಿಮಿನಲ್ ಮಾನಹಾನಿಗೆ ಸಂಬಂಧಿಸಿದೆ.

ನಟಿ ಕಂಗನಾ ರಣಾವತ್ ಅವರಿಗೆ ಸೇರಿದ ಪಾಲಿ ಹಿಲ್ಸ್‌ನಲ್ಲಿನ ಕಚೇರಿಯನ್ನು ಅಕ್ರಮವಾಗಿ ಮಾರ್ಪಾಡು ಮಾಡಲಾಗಿದೆ ಎಂಬ ಕಾರಣಕ್ಕೆ ಬಿಎಂಸಿ ಅಧಿಕಾರಿಗಳು ಕಟ್ಟಡವನ್ನು ನೆಲಸಮ ಮಾಡಿದ್ದರು.

ನಟಿ ಕಂಗನಾ ಕಾನೂನಿ ಪ್ರಕಾರ ಅನುಮತಿ ತರಲು ವಿಫಲರಾಗಿದ್ದಾರೆಂದು ಬಿಎಂಸಿ ಹೇಳಿದ ನಂತರ ಈ ಆದೇಶಕ್ಕೆ ಮುಂದಾಗಿದ್ದು, ನಟಿ ಒಂದು ತಿಂಗಳಿನಿಂದ ಒಂದು ವರ್ಷದವರೆಗೆ ಜೈಲು ಶಿಕ್ಷೆ ಎದುರಿಸಬೇಕಾಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss