Tuesday, August 16, 2022

Latest Posts

ಸಿಎಂ ಕಾವೇರಿ ನಿವಾಸದ ಆರು ಮಂದಿಗೂ ಕೊರೋನಾ ದೃಢ

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಈಗ ಕಾವೇರಿ ನಿವಾಸದ ಆರು ಮಂದಿಗೂ ಕೊರೋನಾ ದೃಢಪಟ್ಟಿದೆ.
ನಿನ್ನೆ ರಾತ್ರಿ ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ದೃಢಪಟ್ಟಿದ್ದು, ಈಗ ಅವರ ಆರೋಗ್ಯ ಸ್ಥಿತವಾಗಿದೆ ಎಂದು ಮಣಿಪಾಲ ಆಸ್ಪತ್ರೆ ಹಾಗೂ ಸಿಎಂ ಪುತ್ರ ವಿಜಯೇಂದ್ರ ಹೇಳಿದ್ದಾರೆ.
ನಿವಾಸದಲ್ಲಿದ್ದ ಗನ್‌ಮ್ಯಾನ್,ಅಡುಗೆ ಮಾಡುವ ಮಹಿಳೆ,ವಿಶೇಷ ಕರ್ತವ್ಯ ಅಧಿಕಾರಿ ಹಾಗೂ ವಾಹನ ಚಾಲಕನಿಗೂ ಕೊರೋನಾ ದೃಢಪಟ್ಟಿದೆ. ಸದ್ಯ ಸಿಎಂ ಅವರಿಗೆ ಕೊರೋನಾ ದೃಢಪಟ್ಟಿರುವುದರಿಂದ ಮನೆಯ ಎಲ್ಲರಿಗೂ ಪರೀಕ್ಷೆ ನಡೆಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss