Wednesday, August 17, 2022

Latest Posts

ಸಿಎಂ ಜೊತೆ ಚರ್ಚಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರ: ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು: ಒಬ್ಬರಿಗೆ ಒಂದೇ ಹುದ್ದೆ ಎನ್ನವ ಅಲಿಖಿತವಾದ ನಿಯಮ ಪಕ್ಷದಲ್ಲಿದೆ. ಆದರೆ ಹಿಂದೆ ಕೆಲವು ಸಂದರ್ಭ
ವರಿಷ್ಠರೇ ಬದಲಾವಣೆ ಮಾಡಿದ್ದಾರೆ. ನಮ್ಮ ವಿಚಾರದಲ್ಲೂ ವರಿಷ್ಠರು ನಿರ್ಧರಿಸಬೇಕು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.
ಗಾಂಧಿ ಜಯಂತಿ ದಿನದಂದು ಸಿಎಂ ಜೊತೆ ಚರ್ಚಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಈ ಹಿಂದೆ ನೀಡಿದ್ದ ಹೇಳಿಕೆ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಾಲೋಚಿಸುತ್ತೇನೆ. ಅಕ್ಟೋಬರ್ 5 ರಂದು ದೆಹಲಿಯಲ್ಲಿ ನಡೆಯುವ ಪ್ರಧಾನಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಿ, ಗೃಹ ಸಚಿವ್ ಗಡ್ಕರಿ ಮತ್ತು ಸಂತೋಷ್‍ಜಿ ಅವರೊಂದಿಗೆ ಚರ್ಚಿಸಿ ಅವರು ಕೊಡುವ ಜವಾಬ್ದಾರಿಯಲ್ಲಿ ಮುಂದುವರಿಯುತ್ತೇನೆ ಎಂದರು.
75 ವರ್ಷವಾದ ನಂತರ ಅಧಿಕಾರ ರಾಜಕಾರಣದಿಂದ ನಿವೃತ್ತಿ ಹೊಂದಬೇಕು ಎನ್ನುವುದು ಸಹ ಪಕ್ಷದ ಅಲಿಖಿತ ನಿಯಮದ ಒಂದು ಭಾಗ. ಕೆಲವೊಮ್ಮೆ ಅದನ್ನು ಬದಲಿಸುವುದು ವರಿಷ್ಠ ಮಂಡಳಿ ನಿರ್ಣಯ ಎಂದರು.
ಕೆಲವು ನಾಯಕರು, ಕಾರ್ಯಕರ್ತರು ತಾವು ಸಚಿವರಾಗಿ ಮುಂದುವರಿಯಬೇಕು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ನನಗೆ ಸಚಿವ ಸ್ಥಾನ ಅಥವಾ ಪಕ್ಷ ಸಂಘಟನೆ ವಿಚಾರ ಬಂದಾಗ ನಮ್ಮ ಆಯ್ಕೆ ಸಂಘಟನೆಯೇ ಎಂದು ತಿಳಿಸಿದರು.
ರಾಷ್ಟ್ರೀಯ ರಾಜಕಾರಣ ವೈಯುಕ್ತಿಕ ಆಸಕ್ತಿಯಿಂದ ಬಂದಿದ್ದಲ್ಲ. ನನ್ನ ನಿರೀಕ್ಷೆಯೂ ಇರಲಿಲ್ಲ. ಎಲ್ಲೂಕೂಡ ನಾನು ರಾಷ್ಟ್ರಮಟ್ಟದ ಪದಾಧಿಕಾರಿಯಾಗಬೇಕೆನ್ನುವ ಅಪೇಕ್ಷೆಯನ್ನು ವ್ಯಕ್ತ ಪಡಿಸಿರಲಿಲ್ಲ. ಇದೊಂದು ಅಚಾನಕ್ಕಾಗಿ ಸಿಕ್ಕ ಅವಕಾಶ. ಭಗವಂತನ ನಿಶ್ಚಯದಂತೆ ಆಗಲಿ ಎಂದು ಜವಾಬ್ದಾರಿ ಒಪ್ಪಿಕೊಂಡಿದ್ದೇನೆ ಎಂದರು.
ಕೆಲವರಿಗೆ ಅಧಿಕಾರ ರಾಜಕಾರಣ ತುಂಬಾ ಕುಷಿಕೊಡುವ ಸಂಗತಿ. ಮತ್ತು ಅಧಿಕಾರಕ್ಕಾಗಿಯೇ ರಾಜಕಾರಣ ಮಾಡುವಂತ ಬಹುಜನರಿರುವ ಈ ಕಾಲದಲ್ಲಿ. ಈ ಜವಬ್ದಾರಿ ನಿರ್ವಹಿಸೋದು ಅಷ್ಟು ಸುಲಭದ ಸಂಗತಿಯಲ್ಲ, ನನ್ನ ಕೊರತೆಗಳು ನನಗೆ ತಿಳಿದಿದೆ. ಸರ್ಕಾರಿ ಶಾಲೆಯಲ್ಲಿ ಪ್ರಕೃತಿಯ ಜೊತೆ ಜೀವನ ಮಾಡಿರುವ ನನಗೆ ಎಲ್ಲರ ಬೆಂಬಲದಿಂದ ಸವಾಲನ್ನು ಎದುರಿಸುವ ಸಾಮಥ್ರ್ಯ ಸಿಗುತ್ತದೆ ಎಂಬ ವಿಶ್ವಾಸದಿಂದ ಆ ಸ್ಥಾನಕ್ಕೆ ನ್ಯಾಯ ಒದಗಿಸುವ ಜೊತೆಗೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ನ್ಯಾಯ ಕೊಡಿಸುವ ವಿಶ್ವಾಸ ಇದೆ. ಇದರೊಂದಿಗೆ ಜನರ ಹೃದಯಕ್ಕೆ ಮುಟ್ಟಿಸುವಂತೆ ಮಾತನಾಡಲು ಭಾಷೆಯನ್ನು ಒಂದು ಮಾಧ್ಯಮವಾಗಿ ಹಿಂದಿ ಮತ್ತು ಇಂಗ್ಲೀಷ್‍ನ್ನು ನನ್ನದಾಗಿಸಿಕೊಳ್ಳಬೇಕು ಆ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!