Friday, July 1, 2022

Latest Posts

ಸಿಎಂ ಪುತ್ರ ವಿಜಯೇಂದ್ರ ಸರ್ವಾಧಿಕಾರ ಧೋರಣೆ ತೋರುತ್ತಿದ್ದಾರೆ: ಯತ್ನಾಳ ಆರೋಪ

ಹೊಸದಿಗಂತ ವರದಿ, ವಿಜಯಪುರ:

ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಮಂತ್ರಿಗಳು ಅವರ ಮನೆಗೆ ಹೋದರೆ ಅವರ ಮುಂದೆ ಕುಳಿತುಕೊಳ್ಳಲು ಕುರ್ಚಿ ಇರುವುದಿಲ್ಲ. ಕುರ್ಚಿ ಆಸೆಗಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದರೆ ಎಂದು ಆರೋಪಿಸಿದರು.

ಯಡಿಯೂರಪ್ಪ ಸಿಎಂ ಆಗಲಿ ಎಂದು ನಾವು ಹೋರಾಟ ಮಾಡಿದೆವು. ಇಂದು ವಿಜಯೇಂದ್ರ ಸಂಪೂರ್ಣ ಅಧಿಕಾರ ನಡೆಸುತ್ತಿದ್ದಾರೆ. ಹಮ್ ನಾ ಖಾವುಂಗಾ ನಾ ಖಿಲಾಂವುಂಗಾ ಎಂದವರು ಪ್ರಧಾನಿ ಮೋದಿ. ಇಂದು ವರ್ಗಾವಣೆ ವಿಚಾರದಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ವಿಜಯೇಂದ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯೇಂದ್ರಗೆ ರಾತ್ರಿ ವ್ಯವಸ್ಥೆ ಮಾಡುವ ಚೇಲಾಗಳು, ಇಂದು ನಿಗಮ ಮಂಡಳಿಯ ಅಧ್ಯಕ್ಷರು. ಎಲ್ಲದರಲ್ಲೂ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss