ಸಿಎಎಗೆ ವಿರೋಧ: ಬಾಂಗ್ಲಾ ವಿದ್ಯಾರ್ಥಿನಿಗೆ ಗೇಟ್ ಪಾಸ್

0
203

ಕೊಲ್ಕತ್ತ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಬೆಂಬಲಿಸಿ ಪ್ಲೇ ಕಾರ್ಡ್ ಗಳನ್ನು ಫೇಸ್ ಬುಕ್ ನಲ್ಲಿ ಹಾಕಿ ಸರ್ಕಾರ ವಿರೋಧಿ ನೀತಿ ಅನುಸರಿಸಿದ ಹಿನ್ನಲೆಯಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಬಾಂಗ್ಲಾದೇಶದ ವಿದ್ಯಾರ್ಥಿನಿಯೊಬ್ಬಳಿಗೆ ಭಾರತ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ.

ವಿದೇಶಿಯರ ಪ್ರಾದೇಶಿಕರ ನೋಂದಣಿ ಕಚೇರಿ ವಿದ್ಯಾರ್ಥಿನಿ ಅಫ್ಸರಾ ಅನಿಕಾ ಮೀಮ್ (20) ಗೆ ಭಾರತ ಬಿಟ್ಟು ತೆರಳುವಂತೆ ಪತ್ರದ ಮೂಲಕ ಸೂಚಿಸಿದ್ದು, ಭಾರತದಲ್ಲಿಯೇ ಇದ್ದುಕೊಂಡು ವಿದ್ಯಾಭ್ಯಾಸ ನಡೆಸಿತ್ತಾ ಭಾರತದ ವಿರುದ್ಧವೇ ಚಳವಳಿಗಳಲ್ಲಿ ಭಾಗವಹಿಸುವ ಮೂಲಕ ದೇಶದ ನಿಯಮ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ. ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿನಿ ಭಾಗವಹಿಸಿದ್ದಳು.

LEAVE A REPLY

Please enter your comment!
Please enter your name here