ಸಿಎಎ ಸಂಬಂಧಿಸಿ ಗೃಹಬಂಧನ ಇಲ್ಲ

0
122

ಬೆಂಗಳೂರು: ಸಿಎಎ ಸಂಬಂಧಿಸಿದಂತೆ ಯಾವ ಒಬ್ಬ ವ್ಯಕ್ತಿಯಾದರೂ ದೇಶದಲ್ಲಿ ಗೃಹಬಂಧನದಲ್ಲಿದ್ದರೆ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಿಜೆಪಿ ಸದಸ್ಯ ರವಿಕುಮಾರ್ ಹೇಳಿದ್ದಾರೆ.

ವಿಧಾನ ಪರಿಷತ್ ಬೆಳಗಿನ ಕಲಾಪದಲ್ಲಿ ಸಂವಿಧಾನದ ಮೇಲೆ ಚರ್ಚೆ ನಡೆಸುವ ವೇಳೆ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಮಾತನಾಡುತ್ತ, ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಸಮಸ್ಯೆ ಎದುರಾಗುತ್ತಿದೆ ಎಂದು ಸಮೀಕ್ಷೆ ತಿಳಿಸುತ್ತಿವೆ. ದೇಶದಲ್ಲಿ 18 ಲಕ್ಷ ಜನರನ್ನು ಬಂಧಿತ ಕೇಂದ್ರದಲ್ಲಿರಿಸಲಾಗಿದೆ ಎಂದಾಗ ಆಕ್ಷೇಪ ವ್ಯಕ್ತ ಪಡಿಸಿದ ಸಚಿವ ಸಿ.ಟಿ.ರವಿ, ಐವನ್ ಡಿಸೋಜಾ ಅವರು ಸದನಕ್ಕೆ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಯಾರನ್ನೂ ಗೃಹಬಂಧನದಲ್ಲಿಟ್ಟಿಲ್ಲ. ಗೋಸುಂಬೆಗಳು ಬಣ್ಣ ಬದಲಾಯಿಸುವುದನ್ನು ನೋಡಿದ್ದೇನೆ. ಗೋಸುಂಬೆ ತರಹದ ಸದಸ್ಯರೂ ಇದ್ದಾರೆ ಎಂಬುದು ಇವತ್ತು ತಿಳಿಸಿತು ಎಂದರು.

ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ದೇಶದಲ್ಲಿ ಯಾರನ್ನೂ ಗೃಹ ಬಂಧನದಲ್ಲಿಡಲಿಲ್ಲ. ಯಾರಾದರೂ ಒಬ್ಬರನ್ನು ತೋರಿಸಿದರೆ ಅಥವಾ ಒಬ್ಬರ ಹೆಸರನ್ನು ಹೇಳಿದರೂ ನಾನು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಇಲ್ಲವಾದಲ್ಲಿ ನೀವು ನೀಡ್ತುತೀರಾ ಎಂದು ಐವನ್ ಡಿಸೋಜಾಗೇ ಸವಾಲೆಸೆದರು.

ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ , ಸಂವಿಧಾನದ ಕುರಿತಾದ ಚರ್ಚೆ ಇತಿಮಿತಿಯಲ್ಲಿ  ಮಾತನಾಡುವುದು ಸೂಕ್ತ.ಇಲ್ಲಿ ಸಿಎಎ ಕುರಿತದ ಅನಾವಶ್ಯಕ ಚರ್ಚೆ ಬೇಡ ಎಂದು ಗದ್ದಲಕ್ಕೆ ತೆರೆ ಎಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜ ಸಂವಿಧಾನದ ಕುರಿತು ಮಾತನಾಡುವಾಗ ಪೌರತ್ವದ ಕುರಿತು ಮಾತನಾಡಬೇಡ ಎಂದರೆ ಇನ್ನೇನು ಮಾತನಾಡಬೇಕೆಂದು ತಿಳಿಯುತ್ತಿಲ್ಲ. ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಪ್ರತ್ಯೇಕ ದೇಶದ ಕೂಗು ಕೇಳಿ ಬರುತ್ತಿದೆ ಎನ್ನುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕಾಶ್ಮೀರ ಪ್ರತ್ಯೇಕ ಕೂಗನ್ನೇ ಹತ್ತಿಕ್ಕಲಾಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ನಿಮ್ಮ ಹೇಳಿಕೆಯಂತೆ ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು.

LEAVE A REPLY

Please enter your comment!
Please enter your name here