Sunday, April 11, 2021

Latest Posts

‘ಸಿಗ್ನಲ್’ ನಂಬಿ ಓಡೋಡಿ ಬಂದವರಿಗೆ ಈಗ ಅತ್ತ ದರಿ, ಇತ್ತ ಪುಲಿ ಸ್ಥಿತಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಒಂದೆಡೆ ವಾಟ್ಸ್‌ಆಪ್ ತನ್ನ ಆತುರದ ನಿರ್ಧಾರದಿಂದ ಬೇಸತ್ತು ‘ಸಿಗ್ನಲ್’ನತ್ತ ಮುಖ ಮಾಡಿದ್ದ ಬಳಕೆದಾರರು ಈಗ ‘ಸಿಗ್ನಲ್’ ಸಿಗದೆ ಪರದಾಟ ನಡೆಸುತ್ತಿದ್ದಾರೆ!
ಏಕಾಏಕಿ ಬಳಕೆದಾರರು ‘ಸಿಗ್ನಲ್’ ಡೌನ್‌ಲೋಡ್ ಮಾಡಿದ ಪರಿಣಾಮ, ಸರ್ವರ್ ಡೌನ್ ಸಮಸ್ಯೆ ಕಾಣಿಸಿಕೊಂಡಿದ್ದು,  ವಿಶ್ವದಾದ್ಯಂತ ಇದರ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಲ್ಲಿ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.
ನಾವು ಈ ಸಮಸ್ಯೆಯನ್ನು ಗಮನಿಸಿದ್ದೇವೆ. ಸಾಧ್ಯವಾದಷ್ಟು ಬೇಗ ಸೇವೆಗಳನ್ನು ಪುನಃಸ್ಥಾಪಿಸಲು ಶ್ರಮಿಸುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆಯಾದರೂ ಬಳಕೆದಾರರ ಅಸಮಾಧಾನ ಮಾತ್ರ ಕಡಿಮೆಯಾಗಿಲ್ಲ.
ಮೂಲಗಳ ವರದಿಗಳ ಪ್ರಕಾರ, ಭಾರತವೊಂದರಲ್ಲಿಯೇ ‘ಸಿಗ್ನಲ್’ ಬಳಕೆ ಸುಮಾರು 3 ಮಿಲಿಯನ್ ಮೀರಿದೆ. ಭಾರತೀಯ ಮಾರುಕಟ್ಟೆ ಎಲ್ಲಾ ನಿರೀಕ್ಷೆಗಳನ್ನು  ದಾಟಿ ಈ ಅಪ್ಲಿಕೇಶನ್ ಡೌನ್‌ಲೋಡ್ ಆಗಿದೆ. ಕಳೆದ ಕೆಲವು ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಬಳಕೆದಾರರ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸಲು ನಮ್ಮ ತಂಡ ಶ್ರಮಿಸುತ್ತಿದೆ ಎಂದು ಕಂಪನಿ ತಿಳಿಸಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss