ಹೊಸದಿಗಂತ ಆನ್ಲೈನ್ ಡೆಸ್ಕ್:
ಬಿಜೆಪಿ ಅಧಿಕಾರಕ್ಕೆ ಬಾರದಿರಲು ಜೆಡಿಎಸ್ ಜೊತೆಗೂಡಿದ್ದ ಸಿದ್ದರಾಮಯ್ಯ ಇದೀಗ ಕೈಗೆಟುಕದ ದ್ರಾಕ್ಷಿ ಹುಳಿ ಎಂದು ನರಿ ಕತೆ ಹೇಳಿದರೆ ಯಾರು ಕೇಳ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಎರಡೂ ಸೇರಿ ಸೋಲಿದ್ದಾರೆ ಎಂದು ಸಿದ್ದು ಹೇಳಿದ್ದಾರೆ. ಆದರೆ ನಾವು ಒಳ ಒಪ್ಪಂದ ಮಾಡಿದ್ದರೆ ಬಾದಾಮಿಯಲ್ಲೂ ಅವರು ಸೋತಿರುತ್ತಿದ್ದರು. ಸೋತಾಗಿದೆ. ಈಗ ಅದರ ಬಗ್ಗೆ ಏನೇನೋ ಹೇಳಬಾರದು. ಜೆಡಿಎಸ್ ನಿಮ್ಮನ್ನು ಸೋಲಿಸೋ ಪಿತೂರಿ ಮಾಡಿದ್ದರೆ ಅಂಥವರ ಜೊತೆ ಸರ್ಕಾರ ಯಾಕೆ ಮಾಡಿದ್ದೀರಿ? ಎಂದರು.