Thursday, August 18, 2022

Latest Posts

ಸಿದ್ದರಾಮಯ್ಯಲ್ಲ-ನಿದ್ರಾರಾಮಯ್ಯ ಮಾಜಿ ಸಿಎಂ ವಿರುದ್ಧ ರಂಜನ್ ಕಿಡಿ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡವರು ಬೀಫ್ ತಿನ್ನುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚರಂಜನ್, ಸಿದ್ದರಾಮಯ್ಯ ಅವರು ಸದಾ ನಿದ್ದೆಯಲ್ಲಿರುತ್ತಾರೆ. ನಿದ್ದೆಯಿಂದ ಎದ್ದು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕೊಡಗಿನ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅವರ ಹೇಳಿಕೆ ಖಂಡನೀಯವಾಗಿದ್ದು, ಕುಂಭಕರ್ಣನಂತೆ
ವರ್ತಿಸುವ ಅವರನ್ನು ನಿದ್ರಾರಾಮಯ್ಯ ಎಂದು ಕರೆಯುವುದು ಸೂಕ್ತ. ಕೊಡವರ ಬಗ್ಗೆ ನೀಡಿರುವ ಹೇಳಿಕೆ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಅಪ್ಪಚ್ಚು ರಂಜನ್ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!