Saturday, July 2, 2022

Latest Posts

ಸಿದ್ದರಾಮಯ್ಯ-ಡಿಕೆಶಿ ನಡುವೆ ಹೊಂದಾಣಿಕೆ ಇದೆಯಾ‌ ಮೊದಲು ಹೇಳಲಿ: ಸಚಿವ ಎಸ್.ಟಿ ಸೋಮಶೇಖರ

ಹಾವೇರಿ: ಕೋವಿಡ್ ಎದುರಿಸುವಲ್ಲಿ ರಾಜ್ಯ ಸರಕಾರದಲ್ಲಿನ ಸಚಿವರಲ್ಲಿ ಹೋಂದಾಣಿಕೆ ಇಲ್ಲ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ತಮ್ಮ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನಡುವೆ ಹೊಂದಾಣಿಕೆ ಇದೆಯೇ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.

ಬುಧವಾರ ಜಿಲ್ಲೆಯ ಬ್ಯಾಡಗಿಯ ಎಪಿಎಂಸಿ ಮಾರುಕಟ್ಟೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೋವಿಡ್ ವಿಚಾರದಲ್ಲಿ ಯಾರ ಮಧ್ಯೆ ಹೊಂದಾಣಿಕೆ ಇಲ್ಲ ಎನ್ನುವುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂಬ ಡಿ.ಕೆ.ಶಿವಕುಮಾರ ಹೇಳಿಕೆಗೆ ಟಾಂಗ್ ನೀಡಿದ ಅವರು. ಸರ್ಕಾರದ ಸಚಿವರಲ್ಲಿ ಹೊಂದಾಣಿಕೆಯಿಲ್ಲ ಎಂದು ಮಾಡಿರುವ ಆರೋಪದಲ್ಲಿ ಯಾವುದೇ ಹುರಳಿಲ್ಲ. ನಮ್ಮ ಸಚಿವರು ರಾಜ್ಯಾಧ್ಯಂತ ಪ್ರವಾಸ ಮಾಡಿ, ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದಾರೆ. ನಮ್ಮ ಎಲ್ಲ ಸಚಿವರ ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮಧ್ಯ ನೂರಕ್ಕೆ ನೂರರಷ್ಟು ಹೊಂದಾಣಿಕೆಯಿಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದರು.

ಕೊರೋನಾ ವಿಚಾರದಲ್ಲಿ ಸರಕಾರ ಭ್ರಷ್ಟಾಚಾರ ಮಾಡಿಲ್ಲ. ವಿರೋಧ ಪಕ್ಷದವರು ಲೆಕ್ಕ ಕೊಡಿ ಎಂಬ ಆಂದೋಲಕ್ಕೆ, ನಾವು ಸಹ ಲೆಕ್ಕ ತಗೊಳ್ಳಿ ಎಂದು ಸ್ಟಾರ್ಟ್ ಮಾಡಿದ್ದೇವೆ. ಯಾರು ಬೇಕಾದರು ಲೆಕ್ಕ ಪಡೆದುಕೊಂಡು ನೋಡಿಕೊಳ್ಳಲ್ಲಿ. ನಮ್ಮ ಸರಕಾರ ಕೊರೋನಾಗೆ ಇಲ್ಲಿ ತನಕ ವೆಚ್ಚ ಮಾಡಿದ್ದೇ 550 ರಿಂದ 560 ಕೋಟಿ ಎಂದರು.

ಆದರೆ, ಸಿದ್ದರಾಮಯ್ಯನವರು 2300 ಕೋಟಿ ಅವ್ಯವಹಾರ ಆಗಿದೆ ಎಂದರೆ ಎಲ್ಲಿ ಆಗತದೇ. ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಿದ್ದಾರೆ. ವಿಧಾನಸೌದದಲ್ಲಿ ಕುಳಿತುಕೊಂಡು ಲೆಕ್ಕ ನೋಡಲಿ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಅವರ ಚೆಂಬರಗೆ ಕಳುಹಿಸಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಹೇಳಿದರು.

ಆದರೆ, ಕಾಂಗ್ರೆಸ್ ನವರು ಪ್ರಚಾರಕ್ಕಾಗಿ ಲೆಕ್ಕ ಕೊಡಿ, ಲೆಕ್ಕಾ ಕೊಡಿ ಎಂದು ಹೇಳಿಕೆ ನೀಡುತ್ತಿದ್ದಾರೆ. ವಾಸ್ತವದಲ್ಲಿ ಕಾಂಗ್ರೆಸ್ ನಾಯಕರಿಗೆ ಲೆಕ್ಕ ನೋಡೊದು, ಲೆಕ್ಕ ಕೇಳೊದು ಗೊತ್ತಿಲ್ಲ. ಪ್ರತಿಯೊಬ್ಬರು ಸರಕಾರ ಖರ್ಚು ಮಾಡಿರುವ ಹಣದ ಲೆಕ್ಕವನ್ನು ಕೇಳಬಹುದು. ವಿರೋಧ ನಾಯಕರಿಗೆ ಯಾರನ್ನೇ ಮಾಹಿತಿ ಕೇಳಿದರೆ, ಒಂದು ಗಂಟೆಯಲ್ಲಿ ಮಾಹಿತಿ ತಲುಪುವಂತ ವ್ಯವಸ್ಥೆಯಿದೆ ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದರು.

ಪಕ್ಷಾಂತರ ಮಾಡಿದ ಇನ್ನುಳಿದ ಮೂವರಲ್ಲಿ ಇಬ್ಬರನ್ನು ಪರಿಷತ್ ಗೆ ಆಯ್ಕೆ ಮಾಡಿದ್ದಾರೆ. ಅವರಿಗೂ ಸೂಕ್ತ ಸ್ಥಾನ-ಮಾನಗಳನ್ನು ಮುಖ್ಯಮಂತ್ರಿಗಳು ನೀಡುತ್ತಾರೆ. ಅದು ಅವರ ಪರಮಾಧಿಕಾರ ಎಂದು ಸಚವ ಸೋಮಶೇಖರ ತಿಳಿಸಿದರು.

ರೃತರ ಹಿತ ಕಾಯುವದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಯನ್ನು ಮುಖ್ಯಮಂತ್ರಿಯವರು ರಾಜ್ಯದಲ್ಲಿ ಜಾರಿಗೆ ತರಿತ್ತಿದ್ದಾರೆ. ಎಪಿಎಂಸಿ ಸೆಸ್ ಕಡಿಮೆ ಮಾಡುವಂತೆ ಬಹುತೇಕ ವರ್ತಕರು ಆಗ್ರಹಿಸಿದಗದಾರೆಈ ಕುರಿತು ಲಾಕ್ ಡೌನ ತೆರವು ಆದ ನಂತರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಕ್ಕೆ ವರ್ತಕರು ನಿರ್ಧರಿಸಿದ್ದಾರೆ. ಚರ್ಚೆ ನಂತರದಲ್ಲಿ ಯಾವ ನಿರ್ಧಾರವನ್ನು ಅವರು ತಗೆದುಕೊಳ್ಳುತ್ತಾರೋ ನೋಡಬೇಕು. ಪ್ರಸಕ್ತ ಜಾರಿಗೆ ತರಲಾಗಿರುವುದೇ ಅಂತಿಮವಲ್ಲ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss