Thursday, June 30, 2022

Latest Posts

ಸಿದ್ದರಾಮಯ್ಯ ಮತ್ತೊಮ್ಮೆ ಬಾದಾಮಿಯಲ್ಲಿ ಸ್ಪರ್ಧಿಸಲಿ, ಹೇಗೆ ಗೆಲ್ಲುತ್ತಾರೆಂದು ನೋಡ್ತೀವಿ: ರವಿಕುಮಾರ್ ಸವಾಲು

ಹೊಸ ದಿಗಂತ ವರದಿ, ಮೈಸೂರು:

ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧಿಸಲಿ, ಅದು ಹೇಗೆ ಅವರು ಗೆಲ್ಲುತ್ತಾರೆ ಎಂಬುದನ್ನು ನಾವು ನೋಡುತ್ತೀವಿ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಿಧಾನಪರಿಷತ್ ಸದಸ್ಯ ರವಿಕುಮಾರ್ ಸವಾಲು ಹಾಕಿದರು.
ಗುರುವಾರ ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹೆಸರೇ ಸುಳ್ಳು, ಅವರು ಬಿಜೆಪಿ ಬಗ್ಗೆ ಹೇಳುವುದೆಲ್ಲಾ ಸುಳ್ಳು. ಗ್ರಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೆ, ಅವರ ಪಕ್ಷದಲ್ಲಿ ಯಾಕೇ ಉತ್ಸಾಹ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಸುಳ್ಳುಗಾರರು ಎಂದು ಹೇಳುತ್ತಿರುವ ಸಿದ್ದರಾಮಯ್ಯನವರೇನು ಸತ್ಯಹರಿಶ್ಚಂದ್ರರೇ ಅವರು ಸುಳ್ಳು ಹೇಳುತ್ತಿಲ್ಲವೇ,ಅವರು ಹೇಳುವುದೆಲ್ಲಾ ಸತ್ಯವಾ ಎಂದು ಕಿಡಿಕಾರಿದರು.
ಹಾಲು, ತುಪ್ಪ, ಬೆಣ್ಣೆ ಮುಂತಾದವುಗಳನ್ನು ನೀಡುವ ಕಾಮಧೇನುವಾದ ಗೋವುಗಳನ್ನು ಭಾರತೀಯರಾದ ನಾವು ಪೂಜಿಸುತ್ತೇವೆ. ಅದು ನಮ್ಮ ಸಂಸ್ಕೃತಿ ಕೂಡ. ಆದರೆ ಇಂತಹ ಪವಿತ್ರವಾದ ಗೋವುಗಳನ್ನು ತಿನ್ನುವುದೇ ನಮ್ಮ ಆಹಾರ ಸಂಸ್ಕೃತಿಯಾಗಿದೆ ಎಂದು ಸಿದ್ದರಾಮಯ್ಯನವರು ಹೇಳುವ ಮೂಲಕ ಗೋವನ್ನು ಪೂಜಿಸುವ ಭಾರತೀಯ ಭಾವನೆಗಳನ್ನೂ ಘಾಸಿಗೊಳಿಸಿದ್ದಾರೆ. ಅವರ ಹೇಳಿಕೆ ದೇಶ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು ಕಚ್ಚಾಡುತ್ತಿದ್ದಾರೆ. ಇದರಿಂದ ಬೇಸೆತ್ತಿರುವ ರಾಜ್ಯದ ಜನರು ಗ್ರಾ.ಪಂ ಚುನಾವಣೆಯಲ್ಲಿ ಈ ಇಬ್ಬರಿಗೂ ಕಪಾಳ ಮೋಕ್ಷ ಮಾಡಿದ್ದಾರೆ. ಆದರೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ವರ್ತಿಸುತ್ತಿರುವ ಸಿದ್ದರಾಮಯ್ಯನವರು, ಚಾಮುಂಡೇಶ್ವರಿ ಚುನಾವಣೆಯಲ್ಲಿ ಹೀನಾಯವಾಗಿ ಸೋತರು ಬುದ್ಧಿ ಕಲಿತಿಲ್ಲ, ಜನರ ತೀರ್ಪುನ್ನು ಒಪ್ಪಿಕೊಳ್ಳದೆ ಅದನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲದೇ ಜನರು ನೀಡುವ ತೀರ್ಪುಗಳನ್ನು ಅಲ್ಲೇಗೆಳೆಯುತ್ತಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದಕ್ಕೆ, ಅದರ ಹೊಣೆಯನ್ನು ಇವಿಎಂ ಯಂತ್ರಗಳ ಮೇಲೆ ಹಾಕುತ್ತಿದ್ದರು. ಆದರೆ ಗ್ರಾ.ಪಂ ಚುನಾವಣೆಯಲ್ಲಿ ಇವಿಎಂ ಮತಯಂತ್ರ ಬಳಕೆಯಾಗಿಲ್ಲ. ಹಾಗಿದ್ದರೂ ಜನರ ತೀರ್ಪುನ್ನು ಒಪ್ಪಿಕೊಳ್ಳದೆ, ಅದನ್ನು ಪ್ರಶ್ನಿಸುತ್ತಿದ್ದಾರೆ. ಇದೇ ರೀತಿಯ ಧೋರಣೆ, ಮನೋಭಾವವನ್ನು ಅವರು ಮುಂದುವರಿಸಿಕೊAಡು ಹೋದರೆ, ಜನರಿಂದ ತಿರಸ್ಕೃತರಾಗಿ ಮೂಲೆಗುಂಪಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ಎಂ.ರಾಜೇAದ್ರ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss