ಇದೇ ತಿಂಗಳು ೧೫ ರಿಂದ ಚಿತ್ರಮಂದಿರಗಳು ಓಪನ್ ಆಗಲಿದೆ. ಆದರೆ ಸರ್ಕಾರ ಕೆಲ ನಿಯಮಗಳನ್ನು ಹೇರಿದ್ದಾರೆ. ಈ ಕಾರಣಕ್ಕಾಗಿ ಹೊಸ ಸಿನಿಮಾಗಳು , ಅದರಲ್ಲಿಯೂ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ.
ಇದೇ ಸುವರ್ಣಾವಕಾಶವನ್ನು ಬಳಸಿಕೊಂಡು ಲಾಕ್ ಡೌನ್ ಮುನ್ನಾ ಬಿಡುಗಡೆ ಆಗಿದ್ದ ಕೆಲವು ಸಿನಿಮಾಗಳು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಅದರಲ್ಲಿ ಪ್ರಮುಖವಾದುದು ’ಲವ್ ಮಾಕ್ಟೆಲ್’.
ಹೌದು, ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟನೆಯ ಸೂಪರ್ ಹಿಟ್ ಸಿನಿಮಾ ’ಲವ್ ಮೋಕ್ಟೆಲ್’ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅಕ್ಟೋರ್ಬ ೧೬ ರಂದು ಆದಿ-ನಿಧಿ ಪ್ರೇಮ್ ಕಹಾನಿ ದೊಡ್ಡ ಪರದೆಗೆ ಪುನಃ ಬರಲಿದೆ.
ಈ ಬಗ್ಗೆ ಲವ್ ಮಾಕ್ಟೆಲ್ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವುದಕ್ಕೆ ಸಾಕಷ್ಟು ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.ಇನ್ನು ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ.