Monday, August 8, 2022

Latest Posts

ಸಿನಿಮಾ, ಧಾರಾವಾಹಿ ಚಿತ್ರೀಕರಣ ಪುನರಾರಂಭ: ಶೀಘ್ರ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಕೊರೋನಾ ಭೀತಿಯಿಂದ ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣ ನಿಂತಿದ್ದು, ಇದೀಗ ಮಾರ್ಗಸೂಚಿಯೊಂದಿಗೆ ಮತ್ತೆ ಆರಂಭವಾಗುತ್ತಿದೆ.
ಧಾರಾವಾಹಿ ಹಾಗೂ ಸಿನಿಮಾಗಳ ಚಿತ್ರೀಕರಣ ಆರಂಭವಾಗಲಿದೆ ಎಂದು ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಶೂಟಿಂಗ್ ನಡೆಸಲು ಮಾರ್ಗಸೂಚಿ ಪಾಲಿಸಬೇಕಿದ್ದು, ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ ಎಂದಿದ್ದಾರೆ. ಇನ್ನುಳಿದಂತೆ ಥರ್ಮಲ್ ಸ್ಕ್ರೀನಿಂಗ್, ರೋಗದ ಲಕ್ಷಣಗಳಿಲ್ಲದವರು ಮಾಸ್ಕ್ ಧರಿಸಿ ಶೂಟಿಂಗ್‌ಗೆ ಹಾಜರಾಗಬಹುದು. ಇಲ್ಲಿ ಕೂಡ ಸಾಮಾಜಿಕ ಅಂತರ ಪಾಲನೆ ಮಾಡಬೇಕಿದೆ ಎಂದಿದ್ದಾರೆ. ಧಾರಾವಾಹಿಗಳ ಶೂಟಿಂಗ್ ಇಲ್ಲದೆ, ಬೇರೆ ಭಾಷೆಯ ಧಾರಾವಾಹಿಗಳ ಡಬ್ಬಿಂಗ್ ಮಾಡಲಾಗುತ್ತಿದ್ದು, ಇದೀಗ ಧಾರಾವಾಹಿ, ಸಿನಿಮಾ ಶೂಟಿಂಗ್ ನಡೆಸಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss