ಹೊಸದಿಗಂತ ಆನ್ ಲೈನ್ ಡೆಸ್ಕ್:
ಮಲಯಾಳಂ ಹಿರಿಯ ನಟ ಮೋಹನ್ ಲಾಲ್ ಸದ್ಯ ತಮ್ಮ ಬಹುನಿರೀಕ್ಷಿತ ದೃಶ್ಯಂ-2 ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಭಾನುವಾರ ದೃಶ್ಯಂ-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ.
ಇತ್ತ ಮೋಹನ್ ಲಾಲ್ ಸಿನಿಮಾ ಪ್ರಮೋಷನ್ ವೇಳೆ ತಮ್ಮ ಸಿನಿಮಾ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ಹೌದು , ಸಂದರ್ಶನ ವೇಳೆ ನಿಮ್ಮ ಸಿನಿಮಾ ಬದುಕನ್ನು ಯಾವಾಗ ಮುಗಿಸುವಿರಿ ಎಂಬ ಪ್ರಶ್ನೆ ಎದುರಾದಾಗ , ಉತ್ತರ ಕೊಟ್ಟ ಮೋಹನ್ ಲಾಲ್, ನನ್ನ ಸಿನಿಮಾ ಬದುಕು ಯಾವಾಗ ನನಗೆ ಕೆಲಸ ಎಂದೆನಿಸುತ್ತದೆಯೋ ಅಂದೇ ನಾನು ಈ ಚಿತ್ರರಂಗದಿಂದ ದೂರ ಉಳಿಯುತ್ತೇನೆ ಎಂದಿದ್ದಾರೆ.
ನನಗೆ ಪ್ರತಿ ದಿನವೂ ಹೊಸದೇ, ಅದ್ರಲ್ಲೂ ನಟರಾದ ನಮಗೆ ಪ್ರತಿ ದಿನವೂ ಹೊಸದೇ ಆಗಿರುತ್ತೆ, ಯಾಕಂದರೆ ಹೊಸ ವೇಷಗಳು, ಹೊಸ ಸಂಭಾಷಣೆಗಳು, ಕಾಲ್ಪನಿಕ ಯೋಚನೆಗಳು, ಫೈಟಿಂಗ್, ಹಾಡು ಹೀಗೆ ಹಲವಾರು ಹೊಸತುಗಳು ನಮ್ಮ ಬದುಕಲ್ಲಿ ಇವೆ ಎಂದು ಹೇಳಿದ್ದಾರೆ.
ಮೋಹನ್ ಲಾಲ್ ನಟನೆಯ ‘ದೃಶ್ಯಂ-2’ ಸಿನಿಮಾ ಇದೇ ಫೆ. 19ರಂದು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ತೆರೆ ಕಾಣಲಿದೆ.