Sunday, August 14, 2022

Latest Posts

ಸಿನಿಮೀಯ ಶೈಲಿಯಲ್ಲಿ ಲಾರಿ ಹೈಜಾಕ್​: 7 ಕೋಟಿ ರೂ. ಮೌಲ್ಯದ ಮೊಬೈಲ್​ ದೋಚಿ ಎಸ್ಕೇಪ್!

ಆಂಧ್ರಪ್ರದೇಶ : ಸಿನಿಮೀಯ ಶೈಲಿಯಲ್ಲಿ ಮೊಬೈಲ್​ ಸಾಗಿಸುತ್ತಿದ್ದ ಲಾರಿ ಹೈಜಾಕ್​ ಮಾಡಿರುವ ದುಷ್ಕರ್ಮಿಗಳು ಅದರಲ್ಲಿದ್ದ 7 ಕೋಟಿ ರೂ. ಮೌಲ್ಯದ ಮೊಬೈಲ್​ ದೋಚಿ ಪರಾರಿಯಾಗಿದ್ದಾರೆ.
ಆಂಧ್ರಪ್ರದೇಶ – ತಮಿಳುನಾಡು ಗಡಿಯಲ್ಲಿ ಕಾಂಚಿಪುರಂ ಶ್ರೀಪೆರಂಬೂರಿನಿಂದ ಮುಂಬೈಗೆ ಶಿಯೋಮಿ ಕಂಪನಿಯ ಮೊಬೈಲ್ ಸಾಗಿಸುತ್ತಿದ್ದಂತ ಲಾರಿಯನ್ನು ಕಳ್ಳರ ಗುಂಪೊಂದು ತಡೆದಿದೆ. ಲಾರಿ ಚಾಲಕನನ್ನು ಕಟ್ಟಿ ಹಾಕಿರುವ ದುಷ್ಕರ್ಮಿಗಳು, ಲಾರಿಯಲ್ಲಿದ್ದಂತ 16 ಪೆಟ್ಟಿಗಳಲ್ಲಿ 8 ಪೆಟ್ಟಿಗೆಗಳಲ್ಲಿದ್ದಂತ ಸುಮಾರು 7 ಕೋಟಿ ಮೌಲ್ಯದ ಮೊಬೈಲ್ ಅನ್ನು ಮತ್ತೊಂದು ವಾಹನಕ್ಕೆ ಹಾಕಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಈ ಸಂಬಂಧ ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ, 16 ಪೆಟ್ಟಿಗಳಲ್ಲಿನ 15 ಸಾವಿರಕ್ಕೂ ಅಧಿಕ ಮೊಬೈಲ್ ಗಳಲ್ಲಿ 8 ಪೆಟ್ಟಿಗೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕಳವಾಗಿರುವ ಮೊಬೈಲ್ ಗಳ ಅಂದಾಜು ಮೊತ್ತ 7 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಲಾರಿ ಚಾಲಕನ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss