Sunday, July 3, 2022

Latest Posts

ಸಿನಿ ಪ್ರಿಯರಿಗೆ ಬಿಗ್ ನ್ಯೂಸ್: ಓಟಿಟಿಯಲ್ಲಿ‌ ಬಿಡುಗಡೆಯಾಗಲಿದೆ ಬಿಗ್ ಸ್ಟಾರ್ ಗಳ‌‌ ಸಿನಿಮಾಗಳು

ನವದೆಹಲಿ: ಕೋವಿಡ್ ಲಾಕ್ ಡೌನ್ ನಿಂದ ಚಿತ್ರ ಮಂದಿರಗಳು ಬಾಗಿಲು ಮುಚ್ಚಿವೆ. ಮನರಂಜನೆ ಮಾತ್ರ ನಿಂತಿಲ್ಲ. ಓಟಿಟಿ ತಾಣದಲ್ಲಿ ವೆಬ್ ಸೀರಿಸ್ ಹಾಗೂ ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಡಿಸ್ನಿ + ಹಾಟ್ ಸ್ಟಾರ್ ಬಾಲಿವುಡ್ ನ ಕೆಲ ಬಹು ನಿರೀಕ್ಷಿತ ಚಿತ್ರಗಳು ನೇರವಾಗಿ ಆನ್ಲೈನ್ ನಲ್ಲಿ ಬಿಡುಗಡೆಯಾಗಲಿವೆ ಎಂದು ಪ್ರಕಟನೆ ಮಾಡಿದೆ.

ಸೋಮವಾರ ಡಿಸ್ನಿ+ ಹಾಟ್ ಸ್ಟಾರ್ ಆನ್ಲೈನ್ ತಾಣ ಕೋವಿಡ್ ಭೀತಿಯ ಲಾಕ್ ಡೌನ್ ನಿಂದ ಕೆಂಗೆಟ್ಟಿರುವ ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳು ನೇರವಾಗಿ ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿವೆ ಎಂದು ಚಿತ್ರದ ಪಟ್ಟಿಯನ್ನು ಪ್ರಕಟಿಸಿದೆ. ಜುಲೈ ಹಾಗೂ ಅಕ್ಟೋಬರ್ ನಡುವಿನಲ್ಲಿ ಈ ಚಿತ್ರಗಳು ಬಿಡುಗಡೆಯಾಗಲಿದ್ದು ಅಭಿಮಾನಿಗಳಲ್ಲಿ ಖುಷಿ ಮನಮಾಡಿದೆ.

ಸಾಲು ಸಾಲಾಗಿ ಚಿತ್ರಗಳು ಬಿಡುಗಡೆಗೆ ಕಾತರದಿಂದ ನಿಂತಿದ್ದು ಮುಖ್ಯವಾಗಿ ಅಕ್ಷಯ್ ಕುಮಾರ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಲಕ್ಷ್ಮೀ ಬಾಂಬ್’, ಅಜಯ್ ದೇವಗನ್ ಅಭಿನಯಿಸಿರುವ ”ಭುಜ್: ಪ್ರೆಡ್ ಆಫ್ ಇಂಡಿಯಾ’, ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ‘ಸಡಕ್ – 2’, ಅಭಿಷೇಕ್ ಬಚ್ಚನ್ ಅವರ ‘ದಿ ಬಿಗ್ ಬುಲ್’.

ಹೀಗೆ ಈ ನಾಲ್ಕು ಚಿತ್ರಗಳು ಎರಡು ತಿಂಗಳ ನಡುವೆ ಓಟಿಟಿ ತಾಣದಲ್ಲಿ ಬಿಡುಗಡೆಯಾಗಲಿದೆ.ಇನ್ನು ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ ದಿಲ್ ಬೆಚರಾ” ಬಿಡುಗಡೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು ಜುಲೈ 24 ರಂದು ತೆರೆ ಕಾಣಲಿದೆ.

ಡಿಸ್ನಿ + ಹಾಟ್ ಸ್ಟಾರ್ ತನ್ನ ತಾಣದಲ್ಲಿ ಬಿಡಯಗಡೆಯಾಗಲಿರುವ ಚಿತ್ರಗಳ ಪಟ್ಟಿ ಬಿಡುಗಡೆ ಮಾಡಿದ ಮೇಲೆ ಅದರ ಪ್ರಚಾರವನ್ನು ನಟ- ನಟಿಯರು ಈಗಾಗಲೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭರದಿಂದ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss