ಹೊಸ ದಿಗಂತ ಆನ್ಲೈನ್ ಡೆಸ್ಕ್:
ಸಿಪಿಎಂ ಕಾರ್ಯಕರ್ತ ಕೊಟ್ಟ ರಾಜ್ಯ ಸರಕಾರದ ಲಾಟರಿಯಲ್ಲಿ ಯುಡಿಎಫ್- ಬೆಂಬಲಿತ ಅಭ್ಯರ್ಥಿಗೆ ಬಹುಮಾನ ಬಂದ ಅಚ್ಚರಿಯ ವಿದ್ಯಮಾನವೊಂದು ಕಾಸರಗೋಡು ಜಿಲ್ಲೆಯ ಪುಂಗಮ್ಚಾಲ್ನಲ್ಲಿ ನಡೆದಿದೆ!
ಯುಡಿಎಫ್- ಭದ್ರಕೋಟೆ ಪರಪ್ಪ ಬ್ಲಾಕ್ ಪಂಚಾಯತಿಯ ಎಳೇರಿ ವಿಭಾಗದ ಅಭ್ಯರ್ಥಿಯಾಗಿರುವ ರಾಜೇಶ್ ಎಂಬವರು ಮತಯಾಚನೆಗೆ ಬಂದಿದ್ದಾಗ ಅವರ ಸ್ನೇಹಿತನೂ ಆಗಿರುವ ಸಿಪಿಎಂ ಕಾರ್ಯಕರ್ತ ಅಶೋಕ್ ಎಂಬವರು ತಮಾಷೆಯಿಂದ ಮತ ಮಾತ್ರ ಕೇಳಬೇಡಿ ಎಂದು ಲಾಟರಿ ಟಿಕೇಟನ್ನೂ ನೀಡಿದ್ದರು. ಚುನಾವಣಾ ಪ್ರಚಾರ ಮುಗಿಸಿ ಮನೆಗೆ ತೆರಳಿದ ರಾಜೇಶ್ಗೆ ಅಚ್ಚರಿಕಾದಿತ್ತು. ಅದೇ ಟಿಕೇಟ್ಗೆ ಐದು ಸಾವಿರ ರೂಪಾಯಿ ಬಹುಮಾನ ಒಲಿದು ಬಂದಿತ್ತು!
ಇದೀಗ ಈ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದುದಾಗಿ ರಾಕೇಶ್ ಹೇಳಿದ್ದಾರೆ.