Wednesday, August 10, 2022

Latest Posts

ಸಿಪಿಐ, ಪಿಎಸ್‌ಐ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ದಿಗಂತ ವರದಿ ರಾಮನಗರ:

ಆರು ತಿಂಗಳ ಹಿಂದೆ ನಡೆದ ಅಪಘಾತ ಪ್ರಕರಣವೊಂದರಲ್ಲಿ ಕರ್ತವ್ಯಲೋಪವೆಸಗಿದ ಆರೋಪದಡಿ ನಗರದ ಸಿಪಿಐ, ಪಿಎಸ್‌ಐ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತುಪಡಿಸಿರುವ ಘಟನೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಮಾನತ್ತಿಗೆ ಒಳಗಾದವರು ನಗರವೃತ್ತ ನಿರೀಕ್ಷಕ ಗೋವಿಂದರಾಜು, ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಕುಮಾರಸ್ವಾಮಿ, ಠಾಣೆಯ ಪೇದೆಗಳಾದ ನಂದೀಶ್, ಶಿವರುದ್ರಪ್ಪ ಎಂದು ಹೇಳಲಾಗಿದೆ. ಆರು ತಿಂಗಳ ಹಿಂದೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಅಪಘಾತ ಪ್ರಕರಣದಲ್ಲಿ ಅಪಘಾತ ಮಾಡಿದ ವಾಹನಗಳ ಬದಲಾಗಿ ದೂರುದಾರರ ಆಮಿಷಕ್ಕೊಳಗಾಗಿ ಬೇರೆ ವಾಹನಗಳನ್ನು ಅಪಘಾತಕ್ಕೆ ಸೇರಿಸಿದ ಹಿನ್ನೆಲೆಯಲ್ಲಿ ಈ ಪೊಲೀಸರ ತಲೆದಂಡ ಎಂದು ತಿಳಿದು ಬಂದಿದೆ. ವಂದಾರಗುಪ್ಪೆಯ ವ್ಯಕ್ತಿಯೋರ್ವರು ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆಯುವ ಹಲವಾರು ರೀತಿಯ ಭ್ರಷ್ಟಚಾರಗಳ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸುವುದರ ಜೊತೆಯಲ್ಲಿ ಗೃಹ ಇಲಾಖೆಗೂ ದೂರು ನೀಡಿದ್ದರು ಎಂದು ಹೇಳಲಾಗಿದೆ. ಸಂಚಾರಿ ಪೊಲೀಸ್ ಠಾಣೆಯ ಶಿಸ್ತು ಆಯೋಮಯವಾಗಿದ್ದು, ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದ್ದೆ ಇಂತಹ ಅಮಾನತ್ತು ಘಟನೆಗೆ ಸಾಕ್ಷಿಯಾಗಿದೆ ಎಂದು ಹೆಸರೇಳಲಿಚ್ಛಿಸದ ಪೊಲೀಸರ ಮಾತಾಗಿದೆ. ಘಟನೆ ನಡೆದು ಆರು ತಿಂಗಳು ಕಳೆದರೂ ಮೇಲ್ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಯುತ್ತಿತ್ತು. ಕೆಲ ದಿನಗಳ ಹಿಂದೆ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಂದೀಶ್, ಶಿವರುದ್ರಯ್ಯರವರನ್ನು ವರ್ಗಾವಣೆ ಮಾಡಲಾಗಿತ್ತಾದರೂ ಅಮಾನತ್ತು ಆದೇಶ ಬಂದಿರಲಿಲ್ಲ. ಆದರೆ ಮಂಗಳವಾರ ರಾತ್ರಿ ಪೊಲೀಸ್ ಇಲಾಖೆಯ ಅಮಾನತ್ತು ಆದೇಶದಲ್ಲಿ ವೃತ್ತ ನಿರೀಕ್ಷಕ ಗೋವಿಂದರಾಜು, ನಗರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಕುಮಾರಸ್ವಾಮಿ ಹಾಗೂ ಇಬ್ಬರು ಪೇದೆ ಸೇರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss