ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ಅವರ ಮನೆಯಲ್ಲಿ ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ಅವರ ಮೃತದೇಹ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಿಬಿಐ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಂತ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಈ ಘಟನೆಯನ್ನು ಶಿಮ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಮೋಹಿತ್ ಚಾವ್ಲಾ ಖಚಿತಪಡಿಸಿದ್ದಾರೆ.
1973ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದ ಅಶ್ವನಿ ಕುಮಾರ್ 2006ರ ಆಗಸ್ಟ್ ನಿಂದ 2008ರ ಜುಲೈವರೆಗೆ ಹಿಮಾಚಲ ಪ್ರದೇಶದ ಡಿಜಿಪಿಯಾಗಿದ್ದ ಕುಮಾರ್, ನಂತರ 2008ರ ಆಗಸ್ಟ್ ನಿಂದ 2010ರ ನವೆಂಬರ್ ವರೆಗೆ ಸಿಬಿಐ ನಿರ್ದೇಶಕರಾಗಿದ್ದರು.
2014ರಲ್ಲಿ ನಾಗಾಲ್ಯಾಂಡ್ನ ರಾಜ್ಯಪಾಲರಾಗಿಯೂ ನೇಮಕ ಆಗಿದ್ದರು. ಅದಕ್ಕೂ ಮೊದಲು 2013ರಲ್ಲಿ ಅತ್ಯಂತ ಕಡಿಮೆ ಅವಧಿಗೆ ಮಣಿಪುರ ಗವರ್ನರ್ ಆಗಿದ್ದರು. 2008ರಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕಗೊಳ್ಳುವ ಮೊದಲು 2006ರಿಂದ 2008ರವರೆಗೆ ಹಿಮಾಚಲ ಪ್ರದೇಶದ ಡಿಜಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.