Saturday, July 2, 2022

Latest Posts

ಸಿಬ್ಬಂದಿಗಳು ಆರೋಗ್ಯವಾಗಿದ್ದರೆ ಮಾತ್ರ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ: ರಮೇಶ್ ಪಾಟೀಲ್

ಯಾದಗಿರಿ: ಒಂದು ಸಂಸ್ಥೆ ಅಭಿವೃದ್ಧಿಯಾಗಬೇಕಾದರೆ ಅಲ್ಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಆರೋಗ್ಯ ಪ್ರಮುಖ ಕಾರಣವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗೀಯ ಸಂಚಲನ ಅಧಿಕಾರಿ ರಮೇಶ ಪಾಟೀಲ್ ಕರೆ ನೀಡಿದರು.
ಅವರು ಯಾದಗಿರಿ ಘಟಕಕ್ಕೆ ಭೇಟಿ ಮಾಡಿ ಆಯುಷ ಇಲಾಖೆ ನೀಡಿದ ಮಾತ್ರೆಗಳನ್ನು ತಮ್ಮ ಸಿಬ್ಬಂಧಿಗಳಿಗೆ ವಿತರಿಸಿ ಮಾತನಾಡಿದರು. ಈ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ಕೊರೋನಾ ರೋಗವನ್ನು ಹೋಗುವುದಿಲ್ಲ. ಆದರೆ ನಮ್ಮ ದೇಹದಲ್ಲಿ ಕೊರೋನಾ ಸೋಂಕು ತಗಲದಂತೆ ಈ ಮಾತ್ರೆಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ೧೦ ಮಾತ್ರೆಗಳನ್ನು ನೀಡಲಾಗಿದ್ದು, ತಿಂಗಳಿಗೆ ಮೂರು ಮಾತ್ರೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಈ ಮಾತ್ರೆ ತೆಗೆದುಕೊಂಡ ಮೇಲೆ ಕಾಫಿ ಸೇವನೆ ಮಾಡಬಾರದು. ಈ ಮಾತ್ರೆ ಸೇವನೆಯಿಂದ ನಮ್ಮ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಅದಕ್ಕಾಗಿ ಬಿಪಿ ಮತ್ತು ಸಕ್ಕರೆ ಕಾಯಿಲೆ ಇದ್ದವರೂ ಸಹ ಸೇವಿಸಬಹುದು ಎಂದರು.
ಸುರುಪುರ ಘಟಕದ ಚಾಲಕನಲ್ಲಿ ಕೊರೋನಾ ಬಂದಿರುವುದು ನಮಗೆ ತುಂಬಾ ನೋವು ತಂದಿದೆ. ಅವರ ಚಿಕಿತ್ಸೆಗಾಗಿ ಇಲಾಖೆ ಎಲ್ಲಾ ವ್ಯವಸ್ತೆಯನ್ನು ಮಾಡಿದೆ. ನಿಮ್ಮಗಳ ಆರೋಗ್ಯ ಕಾಪಾಡುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದ್ದರಿಂದ ಎಲ್ಲಾ ಘಟಕಗಳಲ್ಲೂ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬ ಸಿಬ್ಬಂದಿಯು ಸರಕಾರದ ನಿರ್ದೇಶನದಂತೆ ಮಾಸ್ಕ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಪ್ರತಿಬಾರಿ ಕೈತೊಳೆಯುವದನ್ನು ಮರೆಯಬಾರದು. ಅದರಲ್ಲೂ ನಿರ್ವಾಹಕರು ಮತ್ತು ಚಾಲಕರು ಹೊರಗಡೆಯ ಪದಾರ್ಥಗಳನ್ನು ಸೇವೆನ ಮಾಡಬಾರದು ಎಂದು ಸಲಹೆ ಮಾಡಿದರು.
ಜಿಲ್ಲಾಡಳಿತ ತಮ್ಮ ಸೇವೆಯನ್ನು ಪ್ರಶಂಸನೆ ಮಾಡಿದೆ. ಏಕೆಂದರೆ ಬೆಂಗಳೂರಿನಿoದ ಅತೀ ಹೆಚ್ಚು ವಲಸಿಗ ಕಾರ್ಮಿಕರನ್ನು ಕರೆ ತಂದು ಉತ್ತಮ ಸೇವೆಯನ್ನು ಮಾಡಿದ್ದೀರಿ. ಅದಕ್ಕಾಗಿ ತಾವೆಲ್ಲರೂ ಜಿಲ್ಲಾಡಳಿತದ ಅಭಿನಂಧನೆಗೆ ಅರ್ಹರಾಗಿದ್ದೀರಿ ಎಂದು ಹೇಳಲು ತುಂಬಾ ಸಂತಸವಾಗುತ್ತದೆ ಎಂದು ಹೇಳಿದರು.
ಈಗಾಗಲೇ ಘಟಕದ ಎಲ್ಲಾ ಸಿಬ್ಬಂದಿಗಳ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಮುಂದೆ ಬಂದಿದ್ದು, ಸಿಬ್ಬಂದಿಯ ಮಾಹಿತಿಯನ್ನು ಕೇಳಿದೆ. ಅದಕ್ಕಾಗಿ ಘಟಕ ವ್ಯವಸ್ಥಾಪಕರಿಗೆ ಸಿಬ್ಬಂದಿಗಳ ವಿವರವನ್ನು ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಪ್ರವೀಣ ಕುಮಾರ ಮತ್ತು ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss