Saturday, July 2, 2022

Latest Posts

ಸಿಬ್ಬಂದಿಗಳ ಮುಷ್ಕರ| ಈ.ರ.ಸಾ. ಸಂಸ್ಥೆಗೆ 30 ಕೋಟಿ ನಷ್ಟ: ಮುಷ್ಕರ ಕೈಬಿಡದಿದ್ದರೆ ಕಠಿಣ ಕ್ರಮ

ಹೊಸ ದಿಗಂತ ವರದಿ, ಕೊಪ್ಪಳ: 

ಸಿಬ್ಬಂದಿಗಳ ಮುಷ್ಕರದ ಹಿನ್ನಲೆಯಲ್ಲಿ ಈ.ರ.ಸಾ. ಸಂಸ್ಥೆಗೆ ಏ.07 ರಿಂದ 16ರ ವರೆಗೆ 30 ಕೋಟಿಗಳಷ್ಟು ಆದಾಯದಲ್ಲಿ ಕೊರತೆಯುಂಟಾಗಿದೆ. ಮುಷ್ಕರ ನಿರತ ಚಾಲನಾ ಸಿಬ್ಬಂದಿಗಳಿಗೆ ಇಲ್ಲಿಯವರೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ವಿನಂತಿಸಿಕೊಳ್ಳಲಾಗಿದೆ. ಇಷ್ಟಾದಾರೂ ಸಹ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದ ಕಾರಣ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಉಂಟಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ತಿಳಿಸಿದ್ದಾರೆ.
ಅವರು ಕೊಪ್ಪಳ ವಿಭಾಗದ ಸಾರಿಗೆ ಇಲಾಖೆ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ ಅವರ ಮೂಲಕ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

7 ಸಿಬ್ಬಂದಿಗಳ ಬಂಧನ:
ಸಾರಿಗೆ ಸಿಬ್ಬಂದಿಗಳು ವಿವಿಧ ಕೃತ್ಯಗಳಲ್ಲಿ ಭಾಗಿಯಾಗಿದ್ದು. ಇದರಲ್ಲಿ ಪೋಲಿಸ್ ಎಫ್‍ಐಆರ್‍ಗಳ ಸಂಖ್ಯೆ ಒಟ್ಟು 22ರ ಪೈಕಿ ವಾಹನಗಳ ಜಖಂ 12 ಪ್ರಕರಣಗಳು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಗಳು 06, ಕೆಸ್ಮಾ 03 ಪ್ರಕರಣಗಳು, ವ್ಯಾಟ್ಸಪ್ ಮುಖಾಂತರ ಪ್ರಚೋದನೆ ಮಾಡಿರುವ 01 ಪ್ರಕರಣ ದಾಖಲಾಗಿವೆ. ಹಾಗೂ ಈ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಿಬ್ಬಂದಿಗಳ ಸಂಖ್ಯೆ 52ರ ಪೈಕಿ ವಾಹನಗಳ ಜಖಂ 08 ಪ್ರಕರಣಗಳು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕgಣÀಗಳು 36, ಕೆಸ್ಮಾ 07 ಪ್ರಕರಣಗಳು, ವ್ಯಾಟ್ಸಪ್ ಮುಖಾಂತರ ಪ್ರಚೋದನೆಯಲ್ಲಿ 01 ಪ್ರಕರಣ ದಾಖಲಾಗಿವೆ. ಮತ್ತು ವಾಹನಗಳ ಜಖಂ ಪ್ರಕರಣದಲ್ಲಿ ಒಟ್ಟು 07 ಮಂದಿ ಬಂಧನಕ್ಕೊಳಗಾಗಿದ್ದಾರೆ.

135 ಸಿಬ್ಬಂದಿಗಳ ವರ್ಗಾವಣೆ:
ಮುಷ್ಕರದ ಹಿನ್ನಲೆಯಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 135 ವರ್ಗಾವಣೆಗೊಂಡ ಸಿಬ್ಬಂದಿಗಳ ಪೈಕಿ ಏ.10 ರಂದು ಒಟ್ಟು 76 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಸಂಚಾರ ಇಲಾಖೆಯಿಂದ 53 ಚಾಲನಾ ಸಿಬ್ಬಂದಿಗಳು, ತಾಂತ್ರಿಕ ಇಲಾಖೆಯಿಂದ 21 ತಾಂತ್ರಿಕ ಸಿಬ್ಬಂದಿಗಳು, ಸಿಬ್ಬಂದಿ ಇಲಾಖೆಯಿಂದ 02 ಆಡಳಿತ ಸಿಬ್ಬಂದಿಗಳು ವರ್ಗಾವಣೆ ಮಾಡಲಾಗಿದೆ ಹಾಗೂ ಏ.15 ಮತ್ತು 16ರ ರಂದು ಒಟ್ಟು 59 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಸಂಚಾರ ಇಲಾಖೆಯಿಂದ 46 ಚಾಲನಾ ಸಿಬ್ಬಂದಿಗಳು, ತಾಂತ್ರಿಕ ಇಲಾಖೆಯಿಂದ 11 ತಾಂತ್ರಿಕ ಸಿಬ್ಬಂದಿಗಳು, ಸಿಬ್ಬಂದಿ ಇಲಾಖೆಯಿಂದ 01 ಆಡಳಿತ ಸಿಬ್ಬಂದಿಗಳು, ಲೆಕ್ಕಪತ್ರ ಇಲಾಖೆಯಿಂದ 01 ಲೆಕ್ಕಪತ್ರ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

4,752 ಬಸ್‍ಗಳು ಆರಂಭ:
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿವಿಧ ವಿಭಾಗದ ಒಟ್ಟು 55 ಸಿಬ್ಬಂದಿಗಳು ಕಾನೂನುಬಾಹಿರವಾಗಿ ಮುಷ್ಕರದಲ್ಲಿ ಭಾಗವಹಿಸಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಮುಷ್ಕರದಲ್ಲಿ ನಿರತ ಚಾಲನಾ ಸಿಬ್ಬಂದಿಗಳ ಮನವೊಲಿಸಿ, ಮುಷ್ಕರವನ್ನು ಕೈಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು. ಇದರಿಂದ ಏ.07 ರಿಂದ 16ರ ವರೆಗೆ ವಿವಿಧ ವಿಭಾಗಗಳ ಒಟ್ಟು 4,752 ವಾಹನಗಳು ಕಾರ್ಯಾಚರಣೆ ಮಾಡಿವೆ.
ಕಾರ್ಮಿಕ ಒಕ್ಕೂಟದ ಮುಷ್ಕರದ ಹಿನ್ನೆಲೆಯಲ್ಲಿ ಈಶಾನ್ಯ ಕಾರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಏ.12 ರಿಂದ 16ರ ವರೆಗೆ ಬಸ್ ನಿಲ್ದಾಣಗಳ ಮೂಲಕ ಖಾಸಗಿ ಬಸ್‍ಗಳು, ಅಂತರರಾಜ್ಯದ ಬಸ್ ಹಾಗೂ ಇತರೆ ವಾಹನಗಳ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಕಲ್ಪಿಸಲಾಗಿದೆ ಎಂದು ಪ್ರಕಟಣೆಯ ಮೂಲಕ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss