Sunday, June 26, 2022

Latest Posts

ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ: 6 ದಿನದಲ್ಲಿ 4 ಕೋಟಿ ರೂಪಾಯಿ ದಂಡ ಸಂಗ್ರಹ!

ಬೆಂಗಳೂರು: ಬೆಂಗಳೂರು ನಗರದಲ್ಲಿ ಲಾಕ್ ಡೌನ್ ಸಡಿಲಿಕೆಯ ನಂತರ ವಾಹನಗಳ ಓಡಾಟ ಜೋರಾಗಿದೆ.  ದಿನದಿಂದ ದಿನಕ್ಕೆ ನಿಯಮ ಉಲ್ಲಂಘನೆಯೂ ಹೆಚ್ಚುತ್ತಲೇ ಇದೆ. ಇದೀಗ ಟ್ರಾಫಿಕ್​ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಟ್ರಾಫಿಕ್​ ಪೊಲೀಸರು ಒಂದೇ ವಾರದಲ್ಲಿ ದಾಖಲೆ ಮೊತ್ತದ ದಂಡ ಕಲೆಕ್ಷನ್ ಮಾಡಿದ್ದಾರೆ.

ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಟ್ರಾಫಿಕ್​ ಪೊಲೀಸರು ಭಾರೀ ಮೊತ್ತದಲ್ಲಿ ದಂಡ ತೆಗೆದುಕೊಳ್ಳಲಾಗುತ್ತಿದ್ದು, ಅ. 4 ರಿಂದ 10ನೇ ತಾರೀಖಿನ ಒರೆಗೆ 4,02,62,800 ರೂ. ದಂಡ ವಸೂಲಿ ಮಾಡಲಾಗಿದ್ದು, 97,213 ಕೇಸ್​​ಗಳು ದಾಖಲಾಗಿವೆ.

ದಾಖಲಾದ ಪ್ರಕರಣ ಹಾಗೂ ಸಂಗ್ರಹಿಸಿದ ದಂಡದ ವಿವರ ಹೀಗಿದೆ…
ಹೆಲ್ಮೆಟ್ ಇಲ್ಲದ ಹಿಂಬದಿ ಸವಾರ 19,403 ಕೇಸ್ 72 ಲಕ್ಷ ದಂಡ,ಸಿಗ್ನಲ್ ಜಂಪ್ 10, 538 ಪ್ರಕರಣ 38.43 ಲಕ್ಷ ದಂಡ,ರಾಂಗ್ ಪಾರ್ಕಿಂಗ್ 3887 ಪ್ರಕರಣದಲ್ಲಿ 11 ಲಕ್ಷ ದಂಡ ವಸೂಲಿ,ನೋ ಎಂಟ್ರಿಯಲ್ಲಿ ವಾಹನ ಚಾಲನೆ 4,154 ಕೇಸ್ 15.77 ಲಕ್ಷ,ಹೆಲ್ಮೆಟ್ ರಹಿತ ಬೈಕ್ ಚಾಲನೆ 30712 ಕೇಸ್ 1.14 ಕೋಟಿ ದಂಡ, ಸೀಟ್ ಬೆಲ್ಟ್ ರಹಿತ ಚಾಲನೆ 5,364 ಕೇಸ್​ಗಳಲ್ಲಿ 25 ಲಕ್ಷ ದಂಡ.

 

 

 

 

 

 

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss