Sunday, June 26, 2022

Latest Posts

ಸಿಲ್ವರ್ ಮರದ ಕೊಂಬೆ ಬಿದ್ದು ಕಾರ್ಮಿಕ ಸಾವು

ಹೊಸದಿಗಂತ ವರದಿ,ಕೊಡಗು:

ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಸಿಲ್ವರ್ ಮರದ ಕೊಂಬೆ ಬಿದ್ದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ಸಮೀಪದ ಗೌಡಳ್ಳಿಯಲ್ಲಿ ನಡೆದಿದೆ.

ಸೋಮವಾರಪೇಟೆಯ ಅಲೇಕಟ್ಟೆ-ಚೌಡ್ಲು ಗ್ರಾಮದ ನಿವಾಸಿ, ಪ್ರಸಕ್ತ ವಳಗುಂದದಲ್ಲಿ ನೆಲೆಸಿದ್ದ ವೆಂಕಟೇಶ್(51)ಮೃತಪಟ್ಟವರು.

ಗೌಡಳ್ಳಿ ಗ್ರಾಮದ ಪ್ರಸನ್ನ ಎಂಬವರ ಕಾಫಿ ತೋಟದಲ್ಲಿ ಸಿಲ್ವರ್ ಮರ ಕಡಿದು ಬೀಳಿಸುವ ಸಂದರ್ಭ ರೆಂಬೆ ತಲೆ ಮೇಲೆ ಬಿದ್ದು ತೀವ್ರಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಅವರು ಮೃತಪಟ್ಟಿರುವುದಾಗಿ ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss