Wednesday, June 29, 2022

Latest Posts

ಸಿಸಿಬಿ ‘ಡ್ರಿಲ್’ ಮುಕ್ತಾಯ: ಪರಪ್ಪನ ಅಗ್ರಹಾರಕ್ಕೆ ಪಾತಕಿ ರವಿ ಪೂಜಾರಿ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಪರಪ್ಪನ ಅಗ್ರಹಾರ ಸೇರಿದ್ದಾನೆ.
ಕೊಲೆ, ಕೊಲೆ ಬೆದರಿಕೆ ಹಫ್ತಾ ಸಹಿತ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ರವಿ ಪೂಜಾರಿಯನ್ನು ಸೆನೆಗಲ್‌ನಲ್ಲಿ ಬಂಧಿಸಿ ಕರ್ನಾಟಕಕ್ಕೆ ಕರೆತರಲಾಗಿತ್ತು.
ಬಂಽತ ರವಿ ಪೂಜಾರಿಯನ್ನು ತಿಲಕ್‌ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಸಂಬಂಧ ಕಸ್ಟಡಿಗೆ ಪಡೆದಿದ್ದ ಸಿಸಿಬಿ ಪೊಲೀಸರು, ವಿಚಾರಣೆ ನಡೆಸಿದ್ದರು. ಈಗ ಪೊಲೀಸ್ ಕಸ್ಟಡಿಯ ಅವಽ ಮುಗಿದ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.
ಬರ್‍ತಾರೆ ಮಂಗಳೂರು ಪೊಲೀಸರು!
ಪಾತಕಿ ಪೂಜಾರಿ ವಿರುದ್ಧ ಮಂಗಳೂರಿನಲ್ಲಿ 37 ಪ್ರಕರಣಗಳು ದಾಖಲಾಗಿದ್ದು, ವಿಚಾರಣೆಗಾಗಿ ಮಂಗಳೂರು ಪೊಲೀಸರು ಈತನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ. ಈಗಾಗಲೇ ಪೊಲೀಸರು ವಾರೆಂಟ್ ಮೂಲಕ ಸಿದ್ದತೆಯನ್ನೂ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss