Saturday, July 2, 2022

Latest Posts

ಸೀರೆಯಲ್ಲಿ ‘ಮಣಿಕರ್ಣಿಕಾ’ ಕಂಗನಾ ರಣಾವತ್​: ನಟಿಗೆ ಸೂರತ್​ನ ಜವಳಿ ವ್ಯಾಪಾರಿಯ ಬೆಂಬಲ!

ಸೂರತ್​: ಮಹಾರಾಷ್ಟ್ರ ಸರ್ಕಾರ ಮತ್ತು ಕಂಗನಾ ರಣಾವತ್ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಮದ್ಯೆ ಸೀರೆಯಲ್ಲಿ ಕಂಗನಾ ಭಾವಚಿತ್ರ ಪ್ರಿಂಟ್ ಮಾಡಿ ಗುಜರಾತ್​ನ ಸೂರತ್​ನ ಜವಳಿ ವ್ಯಾಪಾರಿ ಕಂಗನಾಗೆ ಬೆಂಬಲ ಸೂಚಿಸಿದ್ದಾರೆ.
ಹೌದು , ಸೂರತ್​ನ ಪ್ರಸಿದ್ಧ ‘ಆಲಿಯಾ ಫ್ಯಾಬ್ರಿಕ್ಸ್’ ಎಂಬ ಜವಳಿ ಮಳಿಗೆಯ ಮಾಲೀಕರಾದ ಚೋಟುಭಾಯ್ ಮತ್ತು ರಜತ್ ದಾವ್ರೆ ಎಂಬವರು ‘ಮಣಿಕರ್ಣಿಕಾ’ ಸಿನಿಮಾದಲ್ಲಿ ಕಂಗನಾ ರಣಾವತ್​ ಪಾತ್ರದ ಫೋಟೋವನ್ನು ಸೀರೆಗಳಲ್ಲಿ ಮುದ್ರಿಸಿ ಮಾರಾಟ ಮಾಡುತ್ತಿದ್ದಾರೆ. ಈ ಸೀರೆಗಳ ಮೇಲೆ ನಟಿಯ ಚಿತ್ರ ಮಾತ್ರವಲ್ಲದೇ ‘I Support Kangana Ranaut’ ಎಂದೂ ಮುದ್ರಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರದಿಂದ ಕಂಗನಾ ಅವರಿಗೆ ಅನ್ಯಾಯವಾಗಿದೆ. ಆದರೆ ಕಂಗನಾ ಅವರ ಧೈರ್ಯವನ್ನು ನೋಡಿ ನಮಗೆ ಸ್ಫೂರ್ತಿ ಸಿಕ್ಕಿದೆ. ನಾವು ಕಂಗನಾ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಈಗಾಗಲೇ ಈ ಸೀರೆಗಳಿಗೆ ಮಹಿಳೆಯರು ಆನ್​ಲೈನ್​ನಲ್ಲಿ ಹೆಚ್ಚೆಚ್ಚು ಆರ್ಡರ್​ ಮಾಡಿದ್ದು, ಖರೀದಿಸುವ ಮೂಲಕ ನಟಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಚೋಟುಭಾಯ್ ಹಾಗೂ ರಜತ್ ದಾವ್ರೆ ಹೇಳುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss