Wednesday, July 6, 2022

Latest Posts

ಸೀಲ್‌ಡೌನ್ ವ್ಯಾಪ್ತಿಯಲ್ಲಿ 6 ಪ್ರದೇಶಗಳು: ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದೆ ಕೊರೋನಾ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ನೋವೆಲ್ ಕೊರೋನಾ ವೈರಸ್ ( ಕೋವಿಡ್-19) ಇನ್ನಿಲ್ಲದೆ ಕಾಡುತ್ತಿದೆ. ಮಾರಕ ಸೋಂಕಿನ ಆಘಾತಕ್ಕೆ ಸಿಲುಕಿದ 6 ಗ್ರಾಮಗಳು ಸದ್ಯ ಸೀಲ್‌ಡೌನ್ ಬಲೆಗೆ ಬಿದ್ದಿವೆ.
ಈಗಾಗಲೇ ಬಂಟ್ವಾಳ ತಾಲೂಕಿನ ಕಸಬಾ, ನಾಯಿಲ, ಪುತ್ತೂರು ತಾಲೂಕಿನ ಸಂಪ್ಯ, ಮಂಗಳೂರು ತಾಲೂಕಿನ ಶಕ್ತಿನಗರ, ತೊಕ್ಕೊಟ್ಟು ಸೀಲ್‌ಡೌನ್ ವಾಪ್ತಿಯಲ್ಲಿವೆ. ಗುರುವಾರ ಬೋಳೂರು ಪ್ರದೇಶ ಸೇರ್ಪಡೆಯಾಗಿದ್ದು, ಸದ್ಯ 6 ಪ್ರದೇಶಗಳು ಸೀಲ್ ಡೌನ್‌ಗೆ ಒಳಪಡುವಂತಾಗಿದೆ. ಏ.27ರಂದು  ಬಂಟ್ವಾಳ ತಾಲೂಕಿನ ಸಜಿಪನಡು, ಕರಾಯ ಮತ್ತು ಸುಳ್ಯ ತಾಲೂಕಿನ ಅಜ್ಜಾವರ ಸೀಲ್‌ಡೌನ್‌ನಿಂದ ಮುಕ್ತಿ ಹೊಂದಿದ್ದವು. ಗ್ರಾಮಾಂತರ ಪ್ರದೇಶದಲ್ಲಿ 19 ಕೊರೋನಾ ಪ್ರಕರಣಗಳು ಕಂಡುಬಂದರೆ ನಗರ ಪ್ರದೇಶದಲ್ಲಿ ಈ ವರೆಗೆ 3 ಪ್ರಕರಣಗಳು ಕಂಡುಬಂದಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss