Thursday, July 7, 2022

Latest Posts

ಸೀಲ್ ಡೌನ್ ಶಕ್ತಿನಗರ ಕಕ್ಕೆಬೆಟ್ಟು ಪ್ರದೇಶದಲ್ಲಿದೆ 22 ಮನೆ, ನಾಲ್ಕು ಅಂಗಡಿ, ಒಂದು ಕಚೇರಿ, 120 ಮಂದಿ

ಮಂಗಳೂರು: ಸೋಮವಾರ ಕೊರೋನಾ ಸೋಂಕು ದೃಢಗೊಂಡ ಮಂಗಳೂರು ಕುಲಶೇಖರ ಶಕ್ತಿನಗರದ ತಾಯಿ- ಮಗ ವಾಸಿಸುವ ಕುಲಶೇಖರ ಶಕ್ತಿನಗರ ಕಕ್ಕೆಬೆಟ್ಟು ಪ್ರದೇಶವನ್ನು ಸೀಲ್ ಡೌನ್ ಗೆ ಒಳಪಡಿಸಿ ದ.ಕ.ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರು ಆದೇಶ ಹೊರಡಿಸಿದ್ದಾರೆ. ಸೋಮವಾರ ಸೋಂಕು ದೃಢಗೊಂಡ ರೋಗಿ ಸಂಖ್ಯೆ 506 ಮತ್ತು 507 ಇವರ ಮನೆ ಇರುವ ಮಂಗಳೂರು ತಾಲೂಕು ಪದವು ಗ್ರಾಮದ ಶಕ್ತಿನಗರ ಕಕ್ಕೆಬೆಟ್ಟು ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಡಿಸಿ ಆದೇಶಿಸಿದ್ದಾರೆ. ಈ ಪ್ರದೇಶದಲ್ಲಿ 22 ಮನೆ, ನಾಲ್ಕು ಅಂಗಡಿ, ಒಂದು ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಇಲ್ಲಿ 120 ಮಂದಿ ವಾಸಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss