Monday, August 8, 2022

Latest Posts

ಸುಂಟಿಕೊಪ್ಪ| ಅತ್ತೂರುನಲ್ಲೂರು ಗ್ರಾಮದಲ್ಲಿ ನೇಣಿಗೆ ಶರಣಾದ ಮದ್ಯ ವ್ಯಸನಿ

ಸುಂಟಿಕೊಪ್ಪ: ಮದ್ಯ ವ್ಯಸನಿಯೋರ್ವ ನೇಣಿಗೆ ಶರಣಾದ ಘಟನೆ ಇಲ್ಲಿಗೆ ಸಮೀಪದ ಅತ್ತೂರುನಲ್ಲೂರು ಗ್ರಾಮದಲ್ಲಿ ನಡೆದಿದೆ.
ಕಂಬಿಬಾಣೆ ಗ್ರಾ.ಪಂ. ಅತ್ತೂರು ನಲ್ಲೂರು ಗ್ರಾಮದ ನಿವಾಸಿ ವಿವಾಹಿತ ಕೂಲಿ ಕಾರ್ಮಿಕ ಹರೀಶ (41) ರಾತ್ರಿ
ವೇಳೆ ಸಮೀಪದ ಕಾಫಿ ತೋಟದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಈತ ಮೂರು ಮದುವೆಯಾಗಿದ್ದು, 5 ಮಕ್ಕಳ ತಂದೆ. ಶಿವಮೊಗ್ಗದ ಲಕ್ಕೊಳಿ ಬಾವಿಕರೆ ಗ್ರಾಮದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ. ಶಿವಮೊಗ್ಗದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹರೀಶ ಮಾರ್ಚ್ ತಿಂಗಳ ಲಾಕ್ ಡೌನ್ ಹಿನ್ನೆಲೆಯಲ್ಲಿ ತನ್ನ ತಾಯಿ ಕಂಬಿಬಾಣೆಯ ಮಣಿ
ಅವರ ಮನೆಗೆ ಬಂದಿದ್ದು, ಪ್ರತಿನಿತ್ಯ ಮದ್ಯ ಸೇವಿಸುವ ಚಟ ಹೊಂದಿದ್ದ ಎನ್ನಲಾಗಿದೆ.
ಮೃತ ಹರೀಶನ ತಾಯಿ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದು ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಸಿಬ್ಬಂದಿ
ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss