Thursday, July 7, 2022

Latest Posts

ಸುಂಟಿಕೊಪ್ಪ| ಕೋವಿಡ್-19 ಪರೀಕ್ಷೆಯ ಅವಾಂತರ : ಪೇಚಿಗೆ ಸಿಲುಕಿದ ಪತ್ರಕರ್ತ!

ಸುಂಟಿಕೊಪ್ಪ: ಗಂಟಲು ಹಾಗೂ ಮೂಗಿನ ದ್ರವ ಪರೀಕ್ಷೆ ನಡೆಸದೆ ಕೋವಿಡ್ 19 ಪಾಸಿಟಿವ್ ಬಂದಿದೆ ಎಂದು ಯಾರಿಗಾದರೂ ಕರೆ ಬಂದರೆ ಏನಾಗಬಹುದು? ಅದು ಓರ್ವ ಪತ್ರಕರ್ತನಿಗೆ ! ಇಂತಹದೊಂದು ಪ್ರಸಂಗ ಶುಕ್ರವಾರ ನಡೆದಿದೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕರೊಬ್ಬರಿಗೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮೊಬೈಲ್ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ಅತ್ತ ಕಡೆಯಿಂದ ‘ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕೋವಿಡ್-19 ನೋಡಲ್ ಅಧಿಕಾರಿ ಸುಮಿತ್ರಾ ಮಾತನಾಡುವುದು. ಗುರುವಾರ ನೀವು ಗಂಟಲು ಮೂಗು ದ್ರವ ಪರೀಕ್ಷೆ ಮಾಡಿಸಿದ್ದು, ನಿಮಗೆ ಕೋವಿಡ್ -19 ಪಾಸಿಟಿವ್ ಪರೀಕ್ಷೆಯಿಂದ ಪತ್ತೆಯಾಗಿದೆ. ಆಸ್ಪತ್ರೆಗೆ ಕರೆದೊಯ್ಯಲು ಅಂಬ್ಯುಲೆನ್ಸ್ ಕಳುಹಿಸಿಲಾಗುವುದು ರೆಡಿಯಾಗಿರಿ’ ಎಂದು ತಿಳಿಸಿದ್ದಾರೆ.
ಕರೆ ಸ್ವೀಕರಿಸಿದ ಪತ್ರಕರ್ತರು ಪೇಚಿಗೆ ಸಿಲುಕಿ ದಿಕ್ಕು ತೋಚದಂತಾದರು. ಆದರೂ ಸಾವರಿಸಿಕೊಂಡು ‘ನಾನು ಕೋವಿಡ್ ಪರೀಕ್ಷೆ ಮಾಡಿಸಲೇ ಇಲ್ಲಾ, ಅಲ್ಲದೆ ನಾನು ಬೆಂಗಳೂರಿನ ನಿವಾಸಿಯೂ ಅಲ್ಲ. ನಾನು ಕೊಡಗಿನ ಸುಂಟಿಕೊಪ್ಪ ನಿವಾಸಿ ಎಂದು ಉತ್ತರಿಸಿದ್ದಾರೆ.
ಆಗ ನೋಡಲ್ ಅಧಿಕಾರಿಯವರಿಗೂ ಶಾಕ್ ಆಗಿದ್ದು, ದಾಖಲೆ ಪರಿಶೀಲಿಸಿದಾಗ ಆ.13 ರಂದು ಟೆಸ್ಟ್ ಮಾಡಿಸಿದ್ದ ಬೆಂಗಳೂರಿನ ಜಯನಗರ 4 ಬ್ಲಾಕ್ ನಿವಾಸಿಯೊಬ್ಬರು ಬಿಬಿಎಂಪಿಯಲ್ಲಿ ಪರೀಕ್ಷೆ ನಡೆಸಿದ್ದು ಪತ್ತೆಯಾಯಿತು. ಪರೀಕ್ಷೆ ನಡೆಸಿದ ಆ ಮಹಿಳೆ ಆಚಾತುರ್ಯದಿಂದ ಸುಂಟಿಕೊಪ್ಪದ ಪತ್ರಕರ್ತರಾದ ರಾಜು ರೈ ಅವರ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ.
ಕೋವಿಡ್ ಪರೀಕ್ಷೆಗೆ ತೆರಳುವ ಮಂದಿ ಹೀಗೂ ಮಾಡಬಹುದು ಎಚ್ಚರ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss