ಸುಂಟಿಕೊಪ್ಪ: ವಾಹನ ಚಾಲಕರು ನೂತನವಾಗಿ ಪರವಾನಗಿ ಪಡೆಯಲು ಸಾರಿಗೆ ಇಲಾಖೆಯಿಂದ ಅಂತಿಮ ಗಡುವು ನೀಡಲಾಗಿದ್ದು, ಕೊರೋನಾ ಲಾಕ್ಡೌನ್ನಿಂದ ವಾಯಿದೆ ತುಂಬಿ ಈಗ ನವೀಕರಿಸಲು ಸಾಧ್ಯವಾಗದೆ ಪರವಾನಗಿ ರದ್ದಾಗುವ ಭೀತಿಗೆ ಚಾಲಕರು ಒಳಗಾಗಿದ್ದಾರೆ.
ಸಾರಿಗೆ ಕಛೇರಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಸರಕಾರದಿಂದ ಯಾವುದೇ ರೀತಿಯ ಸುತ್ತೋಲೆ ಬಂದಿಲ್ಲ. ಕೊರೋನಾ ಲಾಕ್ಡೌನ್ನಿಂದ ೨ ತಿಂಗಳ ವಿನಾಯಿತಿಯನ್ನು ನೀಡಲಾಗಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಾಗಿಲ್ಲ ಎಂಬ ಉತ್ತರ ಕೇಳಿ ಬರುತ್ತಿದೆ. ಇದರಿಂದ ಎಲ್ಎಲ್ ಪಡೆದು ಪರವಾನಗಿ ಪಡೆಯಲು ದಿನಾಂಕಕ್ಕೆ ಕಾಯುತ್ತಿದ್ದ ಚಾಲಕರು ಅಂತಂತ್ರ ಸ್ಥಿತಿಗೆ ತಲುಪಿದ್ದಾರೆ. ಸರಕಾರ ವಾಹನ ಚಾಲಕರ ಮುಂದಿನ ಭವಿಷ್ಯದ ಹಿತಕ್ಕಾಗಿ ಲಾಕ್ಡೌನ್ ಅವಧಿಯಲ್ಲಿ ಎಲ್ಎಲ್ನ್ನು ಪರವಾನಗಿಯನ್ನು ಮಾರ್ಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚಾಲಕರ ಪರವಾನಗಿ ರದ್ದುಗೊಳಿಸದೆ ಅವಧಿಯನ್ನು ವಿಸ್ತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.