Friday, August 19, 2022

Latest Posts

ಸುಂಟಿಕೊಪ್ಪ| ಬಂದ್ ನಡುವೆಯೇ ಹಸೆಮಣೆ ಏರಿದ ನವ ಜೋಡಿ!

ಸುಂಟಿಕೊಪ್ಪ: ಕೊರೋನಾ ಸಂಪೂರ್ಣ ಲಾಕ್‌ಡೌನ್ ನಡುವೆಯೇ ಪೂರ್ವ ನಿಗದಿತ ವಿವಾಹ ಕಾರ್ಯಕ್ರಮವೊಂದು ವರನ ಮನೆಯಲ್ಲಿ ಸರಳವಾಗಿಯೇ ನಡೆಯಿತು
ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನಡೆಸುವಂತೆ ಸರಕಾರ ಅನುಮತಿ ನೀಡಿದ್ದರೂ, ಸುಂಟಿಕೊಪ್ಪದ ಉಲುಗುಲಿ ನಾರ್ಗಾಣೆ ಗ್ರಾಮದ ಮಲ್ಲನ ಗುಣವತಿ ಮತ್ತು ಪೂವಯ್ಯ ಅವರ ಪುತ್ರ ಮನುಮೋಹನ(ಮನು) ಹಾಗೂ ಭಾಗಮಂಡಲ ಕೋರಂಗಾಲ ಗ್ರಾಮದ ಬಳ್ಳಡ್ಕ ದಮಯಂತಿ ಅಯ್ಯಪ್ಪ ಅವರ ಪುತ್ರಿ ರೇಷ್ಮಾ ಅವರ ವಿವಾಹ ಭಾನುವಾರ ವರನ ಸ್ವಗೃಹದಲ್ಲಿ ಸರಳವಾಗಿ ನಡೆಯಿತು.
ಸರಕಾರದ ನಿಬಂಧನೆಗಳನ್ನು ಪಾಲಿಸಿಕೊಂಡು, ಎರಡೂ ಕುಟುಂಬದ ಬಂಧುಗಳು ಮತ್ತು ನೆರೆಯ ಮನೆಯವರ ಸಮ್ಮುಖದಲ್ಲಿ ನವ ಜೋಡಿಗಳು ಹಸೆಮಣೆ ಏರಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ವಿವಾಹ ಕಾರ್ಯ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವಿವಾಹ ಕಾರ್ಯಕ್ರಮದಲ್ಲಿ ಸರಕಾರದ ನಿಯಮ ಪಾಲನೆಯಾಗಿದೆಯೇ ಎಂದು ಪರಿಶೀಲನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!