Sunday, July 3, 2022

Latest Posts

ಸುಂಟಿಕೊಪ್ಪ: ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಉತ್ತಮ ಸ್ಪಂದನೆ

ಸುಂಟಿಕೊಪ್ಪ: ಸುಂಟಿಕೊಪ್ಪ ಪಟ್ಟಣದಲ್ಲಿ ಕೊರೋನಾ ಸೋಂಕಿನ ಎರಡು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿವಿಧ ಸಂಘಸಂಸ್ಥೆಗಳು ಕರೆ ನೀಡಿದ್ದ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಉತ್ತಮ ಸ್ಪಂದನೆ ದೊರಕಿತು.
ಸೋಮವಾರ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಒಗ್ಗೂಡಿ, ಸೋಂಕು ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಮಂಗಳವಾರದಿಂದ ಶನಿವಾರದವರೆಗೆ ಬೆಳಗ್ಗೆ 8ರಿಂದ ಸಂಜೆ 6ಗಂಟೆಯವರೆಗೆ ವ್ಯಾಪಾರ ವಹಿವಾಟು ಹಾಗೂ ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು.
ಅದರ ಅನ್ವಯ ಮೊದಲ ದಿನವಾದ ಮಂಗಳವಾರ ವಾಹನಗಳು, ಆಟೋರಿಕ್ಷಾಗಳು, ಕಾರ್ಮಿಕರನ್ನು ಸಾಗಿಸುವ ಜೀಪ್‍ಗಳು ರಸ್ತೆಗಿಳಿಯಲಿಲ್ಲ. ಅಲ್ಲದೆ ವ್ಯಾಪಾರ ವಹಿವಾಟು ನಡೆಸುವ ವಾಣಿಜ್ಯ ಮಳಿಗೆಗಳು ಸಂಪೂರ್ಣವಾಗಿ ಮುಚ್ಚುವ ಮೂಲಕ ಬಂದ್‍ಗೆ ಬೆಂಬಲ ವ್ಯಕ್ತಗೊಂಡಿತು.
ಸೀಲ್‍ಡೌನ್ ಆಗಿರುವ ಪಟ್ಟಣದ ಎರಡು ಪ್ರದೇಶಗಳಿಗೆ ಸುಂಟಿಕೊಪ್ಪದ ತರಕಾರಿ ವ್ಯಾಪಾರಿ ಶಾಜಿರ್ ವರು ಉಚಿತವಾಗಿ ತರಕಾರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್, ಪಿ.ಡಿ.ಓ ವೇಣುಗೋಪಾಲ್, ಗ್ರಾ.ಪಂ.ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಕೆ.ಇ.ಕರೀಂ, ರಜಾಕ್, ನಾಗೇಶ್ ಪೂಜಾರಿ, ಪಿ.ಆರ್.ಸುನಿಲ್ ಕುಮಾರ್, ರಫೀಕ್‍ಖಾನ್, ಎಂ.ಎಸ್.ರವಿ, ಬಿ.ಕೆ.ಮೋಹನ್ ಮತ್ತಿತರರು ಇದ್ದರು.
ಮಧ್ಯಾಹ್ನ ಬಳಿಕ ಬಂದ್: ಚೇಂಬರ್ ಆಫ್ ಕಾಮರ್ಸ್‍ನ ಸುಂಟಿಕೊಪ್ಪ ಸ್ಥಾನೀಯ ಸಮಿತಿ ಸಭೆ ಅಧ್ಯಕ್ಷ ಡಿ.ನರಸಿಂಹ ಅವರ ಅಧ್ಯಕ್ಷತೆಯಲ್ಲಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕೊರೋನಾ ಲಾಕ್‍ಡೌನ್‍ನಿಂದಾಗಿ ಈಗಾಗಲೇ ವ್ಯಾಪಾರಸ್ಥರ ಕುಟುಂಬಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ಅವರ ಬದುಕು ಶೋಚನೀಯವಾಗಿದೆ. ಆದ್ದರಿಂದ ಬುಧವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ಆದರಿಂದ 6 ರಿಂದ 12 ಗಂಟೆಯವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಬೇಕೆಂಬ ವರ್ತಕರ ಮನವಿಯ ಮೇರೆಗೆ ಬುಧವಾರವದಿಂದ ಶುಕ್ರವಾರದವರೆಗೆ ಪ್ರತಿನಿತ್ಯ ಮಧ್ಯಾಹ್ನದ ಬಳಿಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಗಂಗಾಧರ ರೈ, ಖಜಾಂಚಿ ಸತೀಶ್ ಶೇಟ್, ಸಮಿತಿ ಸದಸ್ಯರಾದ ಎಂ.ಎ.ವಸಂತ, ವಿ.ಆರ್.ಸಂತೋಷ್, ಟಿ.ಕೆ.ರಾಜೀವ್, ಜಗದೀಶ್ ರೈ ಹಾಗೂ ರಾಜು ರೈ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss