ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ದಿಟ್ಟ ಹೋರಾಟದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಮೂರನೇ ದಿನದಾಟದಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ ಸೆಡ್ಡು ಹೊಡೆದಿದೆ.
ನಿರ್ಣಾಯಕ ಪಂದ್ಯದಲ್ಲಿ 2 ವಿಕೆಟ್ಗೆ 62 ರನ್ಗಳಿಂದ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, ದಿನದಾಟ ಮುಕ್ತಾಯಕ್ಕೆ ಸ್ವಲ್ಪ ಸಮಯವಿದ್ದಾಗ 336 ರನ್ಗಳಿಗೆ ಆಲೌಟ್ ಆಯಿತು.ದರಿಂದ ಭಾರತ ಮೊದಲ ಇನಿಂಗ್ಸ್ನಲ್ಲಿ 33 ರನ್ಗಳ ಅಲ್ಪ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ತಂಡ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದು, ಒಟ್ಟು 54 ರನ್ ಮುನ್ನಡೆಯಲ್ಲಿದೆ.
ಭಾರತ ತಂಡ ಅಗ್ರ ಬ್ಯಾಟ್ಸ್ಮನ್ಗಳ ವಿಕೆಟ್ ಕಳೆದುಕೊಂಡು ಭಾರಿ ಹಿನ್ನಡೆ ಕಾಣುವ ಭೀತಿ ಎದುರಿಸುತ್ತಿದ್ದಾಗ ಶಾರ್ದೂಲ್ ಠಾಕೂರ್67 ರನ್, 115 ಎಸೆತ, 9 ಬೌಂಡರಿ, 2 ಸಿಕ್ಸರ್)-ವಾಷಿಂಗ್ಟನ್ ಸುಂದರ್(62 ರನ್, 144 ಎಸೆತ, 7 ಬೌಂಡರಿ, 1 ಸಿಕ್ಸರ್) ಜೋಡಿ 7ನೇ ವಿಕೆಟ್ಗೆ 123 ರನ್ ಸೇರಿಸಿತು.